ಹುಬ್ಬಳ್ಳಿ : ಮಾಡಿದ ಸಾಲವನ್ನು ದುಡಿದು ತೀರಿಸು ಎಂದು ಪತ್ನಿ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ಪತಿ ಮಹಾಶಯ ಪತ್ನಿಯನ್ನೇ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ.
ತೆಹಸೀನ್ (28) ಪತಿಯಿಂದಲೇ ಕೊಲೆಯಾದ ಮಹಿಳೆ. ಇರ್ಫಾನ್ ಪತ್ನಿಯನ್ನು ಕೊಂದ ಪತಿ.ಮನೆಯ ಮುಂದೆಯೇ ಪತ್ನಿಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಪಾಪಿ.
ಕೊಲೆ ಬಳಿಕ ಕೆಲ ಕಾಲ ತಲೆಮರೆಸಿಕೊಂಡಿದ್ದ ಇರ್ಫಾನ್, ಬಳಿಕ ಮಗುವಿನೊಂದಿಎ ಕೇಶ್ವಾಪುರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಸಾಲ ತೀರಿಸು ಎಂದು ಪತ್ನಿ ಹೇಳಿದ್ದಳು. ಇದೇ ಕಾರಣಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿದೆ. ಕೋಪದ ಬರದಲ್ಲಿ ಪತ್ನಿಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಇರ್ಫಾನ್ ನನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಪ್ಪನ ಕೋಪಕ್ಕೆ ತಾಯಿ ಬಲಿಯಾಗಿದ್ದು, ಇತ್ತ ಅಪ್ಪ ಜೈಲು ಸೇರಿದ್ದಾನೆ. ತಂದೆ-ತಾಯಿ ಕಳೆದುಕೊಂಡು ಮಗು ಅನಾಥವಾಗಿದೆ.




