Ad imageAd image

ಸಖಿ ಮತಗಟ್ಟೆಯ ಒಂದೇ ಬಣ್ಣದ ಗುಲಾಬಿ ಸೀರೆಯನ್ನು ತೊಟ್ಟಿದ್ದರು ಚುನಾವಣೆಯ ಮಹಿಳಾ ಸಿಬ್ಬಂದಿ

Bharath Vaibhav
ಸಖಿ ಮತಗಟ್ಟೆಯ ಒಂದೇ ಬಣ್ಣದ ಗುಲಾಬಿ ಸೀರೆಯನ್ನು ತೊಟ್ಟಿದ್ದರು ಚುನಾವಣೆಯ ಮಹಿಳಾ ಸಿಬ್ಬಂದಿ
WhatsApp Group Join Now
Telegram Group Join Now

ಕುಷ್ಟಗಿ :-ತಾಲೂಕಿನ ಹನುಮಸಾಗರ ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ೬೦ ಗ್ರಾಮಗಳ ೧೦೩ ಮತಗಟ್ಟೆಗಳಲ್ಲಿ ಮಂಗಳವಾರ ಲೋಕಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯಿತು. ಅಂಟರಠಾಣಾ, ಹೂಲಗೇರಾ, ಕಬ್ಬರಗಿ, ಮನ್ನೇರಾಳ, ಹನುಮಸಾಗರ, ಬೊಮ್ಮನಾಳ, ಮಿಯಾಪುರ, ಮಲಕಾಪುರ ಸೇರಿದಂತೆ ಸೂಕ್ಷö್ಮ ಮತಗಟ್ಟೆಗಳಾಗಿದ್ದವು.

ಹನುಮಸಾಗರದ ಒಟ್ಟು ೧೫ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಮತದಾರರು ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಇದೆ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ತಾಲೂಕಿನ ಎಲ್ಲಾ ಮತಗಟ್ಟೆಗೂ ಭೇಟಿ ನೀಡಿದ್ದರು,ಈ ಬಾರಿ ಹೆಚ್ಚಿನ ಮತಗಟ್ಟೆಗಳನ್ನು ಮಾಡಿದ್ದರಿಂದ ಯಾವ ಮತಗಟ್ಟೆಯಲ್ಲಿಯೂ ಹೆಚ್ಚಿನ ಜನಸಂದಣಿ, ಸರತಿ ಸಾಲುಗಳಿರಲಿಲ್ಲ. ಮತದಾರರು ನಿರಾತಂಕವಾಗಿ, ಹೆಚ್ಚಿನ ಸಮಯ ಕಾಯದೇ ಮತದಾನ ಮಾಡಿದರು.

ಆರ್ಕಷಣಿಯವಾದ ಸಖಿ ಮತಗಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದ ಬೂತ್ ಮತಗಟ್ಟೆ ಸಂಖ್ಯೆ ೮೪ ನೋಡುಗರ ಗಮನಸೆಳೆಯಿತು. ಶೃಂಗಾರ ಇನ್ನೂ ಅದರಲ್ಲಿಯ ಚುನಾವಣೆ ಅಧಿಕಾರಿಗಳು ಮಹಿಳೆಯರಾಗಿದ್ದು, ಎಲ್ಲರು ಕಂದಾಯ ಇಲಾಖೆಯಿಂದ ವಿತರಿಸಲಾಗಿದ್ದ ಒಂದೇ ಬಣ್ಣದ ಗುಲಾಬಿ ಸೀರೆಯನ್ನು ತೊಟ್ಟಿದ್ದರು.

ಭಾರತ ವೈಭವ ವಾರ್ತೆ ಫೋಟೊ 1: ಸಖಿ ಮತಗಟ್ಟೆಯ ಒಂದೇ ಬಣ್ಣದ ಗುಲಾಬಿ ಸೀರೆಯನ್ನು ತೊಟ್ಟಿದ್ದರು.

ಭಾರತ ವೈಭವ ವಾರ್ತೆ ಫೋಟೊ 2: ಹನುಮಸಾಗರದ ಮತಗಟ್ಟೆ ಸಂಖ್ಯೆ ೮೩ರಲ್ಲಿ ಮಂಗಳವಾರ ಮತದಾರರು ಮತವನ್ನು ಚಲಾಯಿಸಲು ಸರತಿಯಲ್ಲಿ ನಿಂತಿರುವದು.

ವರದಿ ಶಿವಕುಮಾರ ಕೆಂಭಾವಿಹಿರೇಮಠ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!