ದಾಂಡೇಲಿ:-ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾಂಡೇಲಿಯಲ್ಲಿರುವ ವೆಸ್ಟ್ ಕೋಸ್ಟ್ ಪೇಪರ್ ಮಿಲ್ಲಿನ ಆಡಳಿತ ಮಂಡಳಿಯ ದೋರಣೆಯಿಂದ ಇಲ್ಲಿ ಕೆಲಸ ಮಾಡುತ್ತಿರುವ 5000 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಶ್ರಮಕ್ಕೆ ತಕ್ಕಂತೆ ವೇತನ ಪರಿಷ್ಕರಣೆ, ಸೇವಾ ಭದ್ರತೆ ಹೀಗೆ ಹಲವಾರು ಸವಲತ್ತು ಕೊಡದೇ ಸತಾಯಿಸುತ್ತಿದ್ದಾರೆ ಎಂದು ಇಲ್ಲಿನ ಕಾರ್ಮಿಕ ಸಂಘಟನೆಗಳ ಮುಖಂಡರು ಆರೋಪ ಮಾಡಿ ಅಹೋರಾತ್ರಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಇನ್ನೂ ಈ ಕಂಪನಿಯ ಇ. ಡಿ ಪೋಸ್ಟ್ ನಲ್ಲಿರುವ ರಾಜೇಂದ್ರ ಜೈನ್ ಎಂಬ ಹೆಸರಿನ ವ್ಯಕ್ತಿ ಮೊನ್ನೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿಯೇ ಕಾರ್ಮಿಕರಿಗೆ ಬಹಿರಂಗವಾಗಿ ಧಮಕಿ ಹಾಕಿರುವುದು ನೋಡಿದ್ರೆ ಈ ಕಂಪನಿಯ ಆಡಳಿತ ಮಂಡಳಿಯವರು ಸಹ ಸರ್ವಾಧಿಕಾರಿ ದೋರಣೆ ಮಾಡು ತ್ತಿದ್ದಾರೆ ಅನಿಸುತ್ತಿದೆ.
ಆದ್ದರಿಂದ ಇಂದು ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ನಿನ್ನೆ ರಾತ್ರಿ ಸ್ಥಳಕ್ಕೆ ಭೇಟಿಕೊಟ್ಟು ಸತ್ಯಾಗ್ರಹ ನೇತೃತ್ವ ವಹಿಸಿದ ಗುರುಗಳು ಹಾಗೂ ವಕೀಲರು ಆದ ಬಿ.ಡಿ ಹಿರೇಮಠ ಹಾಗೂ ಎಸ್.ಬಿ ಸಾವಂತ್, ವಿಷ್ಣು ರವರ ಅಭಿಪ್ರಾಯ ಸಂಗ್ರಹಿಸಿ ನಮ್ಮ ಪತ್ರಿಕಾ ಸಮೂಹ ಸಹ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದೆ. ಆದ್ದರಿಂದ ಇನ್ನಾದ್ರೂ ಈ ಕಂಪನಿಯ ಕಾರ್ಮಿಕರಿಗೆ ನ್ಯಾಯ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ
ವರದಿ:- ಬಸವರಾಜು.