ಪ್ರಯಾಗ್ ರಾಜ್ : ಮಹಾಕುಂಭ ಮೇಳ ಮುಗಿಯಲು ಇನ್ನೂ 15 ದಿನಗಳು ಬಾಕಿ ಇರವಾಗಲೇ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರ ಸಂಖ್ಯೆ 45 ಕೋಟಿ ದಾಟಿದೆ. ಫೆ.26ರಂದು ಮಹಾಕುಂಭ ಮೇಳ ಕೊನೆಯಾಗುವವರೆಗೆ 55 ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಮಾಘ ಮಾಸದ ಹುಣ್ಣಿಮೆ ದಿನವಾದ ಬುಧವಾರ ಪುಣ್ಯಸ್ನಾನ ಜರುಗಿದೆ. ಕೋಟ್ಯಾಂತರ ಜನ ಪುಣ್ಯಸ್ನಾನಗೈದಿದ್ದಾರೆ. ಇದೀಗ ಮಹಾಕುಂಭಮೇಳಕ್ಕೆ ಭೇಟಿ ಕೊಟ್ಟವರ ಸಂಖ್ಯೆ ಭರ್ತಿ 50 ಕೋಟಿಯಾಗಿದೆ.
ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಇಲ್ಲಿಯವರೆಗೆ ಒಟ್ಟು 50 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ.
ಯುಪಿ ಸರ್ಕಾರ ಸುಮಾರು 45 ಕೋಟಿ ಭಕ್ತರ ಪಾಲ್ಗೊಳ್ಳುವ ಬಗ್ಗೆ ಅಂದಾಜಿಸಿತ್ತು. ಆದರೆ ಇನ್ನೂ ಮಹಾಕುಂಭಮೇಳ ಮುಗಿಯಲು 13 ದಿನ ಬಾಕಿಯಿರುವಾಗಲೇ 50 ಕೋಟಿ ಮಂದಿ ಸಂಗಮದಲ್ಲಿ ಮಿಂದೆದ್ದಿದ್ದಾರೆ
ವರದಿಗಳ ಪ್ರಕಾರ, ಬೆಳಿಗ್ಗೆ 8:00 ಗಂಟೆಗೆ ಸುಮಾರು 80 ಲಕ್ಷಕ್ಕೂ ಅಧಿಕಜನರು ಇಂದು ಪವಿತ್ರ ಸ್ನಾನ ಮಾಡಿದರು. ಈ ಸಭೆಯಲ್ಲಿ, 5 ಲಕ್ಷಕ್ಕೂ ಹೆಚ್ಚು ಕಲ್ಪವಾಸಿಗಳು ಮತ್ತು 60 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಸ್ನಾನ ಮಾಡಿದ್ದಾರೆ.
ಈ ವರ್ಷದ ಜನವರಿ 13 ರಂದು ಪ್ರಾರಂಭವಾದ ಮಹಾ ಕುಂಭ 2025, ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕೂಟವಾಗಿದೆ. ಫೆಬ್ರುವರಿ 26ರ ಮಹಾಶಿವರಾತ್ರಿಯವರೆಗೆ ಮಹಾ ಕಾರ್ಯಕ್ರಮ ನಡೆಯಲಿದೆ.