Ad imageAd image

ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ತೀರ್ಪು:ಸಿಹಿ ಹಂಚಿ ಸಂಭ್ರಮಿಸಿದ ಯುವಕರು

Bharath Vaibhav
ಒಳ ಮೀಸಲಾತಿಗೆ ಸುಪ್ರೀಂ ಕೋರ್ಟ್ ತೀರ್ಪು:ಸಿಹಿ ಹಂಚಿ ಸಂಭ್ರಮಿಸಿದ ಯುವಕರು
WhatsApp Group Join Now
Telegram Group Join Now

ಹುಮನಾಬಾದ:-ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಲ್ಲಿ ಒಳಮೀಸಲು ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಗುರುವಾರ ಹುಮನಾಬಾದ ಪಟ್ಟಣದಲ್ಲಿ ದಲಿತ ಮಾದಿಗ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಪರಮೇಶ್ವರ ಕಾಳಮಂದರಗಿ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಒಳ ಮೀಸಲಾತಿಗೆ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಪರಸ್ಪರ ಸಿಹಿ ತಿನಿಸಿ ಸಂಭ್ರಮಿಸಿದರು.

ನಂತರ ಪರಮೇಶ್ವರ ಕಾಳಮಂದರಗಿ ಮಾತನಾಡಿ ರಾಜ್ಯ ಸರಕಾರ ಒಳಮೀಸಲು ನೀಡಬಹುದು ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.ಒಳ ಮೀಸಲು ನೀಡುವಂತೆ ಕಳೆದ ಹಲವು ವರ್ಷಗಳಿಂದ ಮಾಡಿದ ಹೋರಾಟ ಫಲವಾಗಿ ಇದೀಗ ತೀರ್ಪು ನೀಡಿದ್ದು ಸಂತೋಷ ತಂದಿದೆ.

ಒಳಮೀಸಲಾತಿ ನೀಡುವಂತೆ ಹಲವು ಬಾರಿ ಕೇಂದ್ರ, ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು.ಈ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಲಾಗಿತ್ತು. ಅಂತಿಮವಾಗಿ ಸುಪ್ರೀಂಕೋರ್ಟ್ ಒಳ ಮೀಸಲು ಒದಗಿಸುವ ಮೂಲಕ ಸಾಮಾಜಿಕ ನ್ಯಾಯ ನೀಡಿದೆ.ಇದರ ಶ್ರೇಯಸ್ಸು ಮಂದ ಕೃಷ್ಣ ಮಾದಿಗ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕಾಳಪ್ಪ ಪಾಟೀಲ,ಸುನೀಲ್ ಮೇಟಿಕರ್,ಅತಿಕ್ರಾಜ, ಪ್ರವೀಣ್ ಹೊಂಬಾಳೆ,ಮಹೇಶ್ ಕಟ್ಟಿಮನಿ,ಯಶ್, ಆಕಾಶ್, ಪವಿತ್ರ್,ಅರುಣ್ ರೋಹನ್, ಶ್ರೀವಾಸ ಕರಣ್ ಲಕ್ಕಿ ಹಾಗೂ ಮಾದಿಗ ಸಮುದಾಯದ ನೂರಾರು ಯುವಕರು ಭಾಗಿಯಾಗಿದ್ದರು.

ವರದಿ:-  ಸಜೀಶ ಲಂಬುನೋರ್ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!