Ad imageAd image

ರಂಗಸೃಷ್ಟಿಯಿಂದ ರಂಗಭೂಮಿ ದಿನಾಚರಣೆ*; *ನಾಟಕ ಕೃತಿ ಲೋಕಾರ್ಪಣೆ; ರಂಗಗೌರವ ಅರ್ಪಣೆ

Bharath Vaibhav
ರಂಗಸೃಷ್ಟಿಯಿಂದ ರಂಗಭೂಮಿ ದಿನಾಚರಣೆ*; *ನಾಟಕ ಕೃತಿ ಲೋಕಾರ್ಪಣೆ; ರಂಗಗೌರವ ಅರ್ಪಣೆ
WhatsApp Group Join Now
Telegram Group Join Now

ಬೆಳಗಾವಿ : ರಂಗಸೃಷ್ಟಿ ಮತ್ತು ಪರಿಮಳ ಪ್ರಕಾಶನದ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ನಿಮಿತ್ತ ಗುರುವಾರ ನಾಟಕ ಕೃತಿ ಬಿಡುಗಡೆ ಮತ್ತು ರಂಗ ಗೌರವ ಕಾರ್ಯಕ್ರಮ ನಡೆಯಲಿದೆ.

ಅಂದು ಸಂಜೆ 5.30ಕ್ಕೆ ಚನ್ನಮ್ಮ ವೃತ್ತದ ಸಮೀಪವಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಶಿರೀಶ್ ಜೋಶಿ ಅವರ ಪ್ರಿಂಟಿಂಗ್ ಮಶಿನ್ ಮತ್ತು ಮಿ ಟೂ ನಾಟಕ ಕೃತಿಗಳನ್ನು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ಬಿಡುಗಡೆಗೊಳಿಸುವರು. ಕೃತಿ ಕುರಿತು ಧಾರವಾಡದ ರಂಗಕರ್ಮಿ- ಸಾಹಿತಿ ಡಾ. ಶಶಿಧರ ನರೇಂದ್ರ ಮಾತನಾಡಲಿದ್ದಾರೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಮಹಾಯೋಗಿ ವೇಮನ ಪೀಠದ ಸಂಯೋಜಕ ಡಾ. ಎಚ್.ಬಿ.ನೀಲಗುಂದ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ರಂಗಕರ್ಮಿ ಶಂಕರ ಅರಕೇರಿ ಅವರಿಗೆ ರಂಗಸೃಷ್ಟಿಯ ಈ ವರ್ಷದ ರಂಗ ಗೌರವ ನೀಡಿ ಸನ್ಮಾನಿಸಲಾಗುವುದು. ರಂಗಸೃಷ್ಟಿಯ ಅಧ್ಯಕ್ಷ ರಮೇಶ ಜಂಗಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ರಂಗಸೃಷ್ಟಿಯ ಉಪಾಧ್ಯಕ್ಷ ಎಂ.ಕೆ.ಹೆಗಡೆ, ಕಾರ್ಯದರ್ಶಿ ಶರಣಗೌಡ ಪಾಟೀಲ, ಕೋಶಾಧಿಕಾರಿ ಶಾಂತಾ ಆಚಾರ್ಯ ಮತ್ತು ರಂಗಸೃಷ್ಟಿ ಬಳಗದ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಸಕ್ತರನ್ನು ಆಹ್ವಾನಿಸಿದ್ದಾರೆ.

ಪ್ರತೀಕ್ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!