ಧಾರವಾಡ: ತಾಲೂಕು ಮುರಕಟ್ಟಿ ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಖತರ್ನಾಕ್ ಕಳ್ಳತನ ನಡೆದಿದೆ.
ದೇವಸ್ಥಾನವನ್ನು ಬಿಡದ ಖತರ್ನಾಕ್ ಕಳ್ಳರು ಲಾಂಗು ಮಚ್ಚುಗಳ ಸಮೇತ ಬಂದು ಕಳ್ಳತನ ಮಾಡಿರುವ ಘಟನೆ ದೇವಸ್ಥಾನದ ಸಿಸಿ ಟಿವಿ ಕ್ಯಾಮರಾದಲ್ಲಿ ಕಂಡುಬದಿದೆ.
ಮೊನ್ನೆರಾತ್ರಿ ಸುಮಾರು ಮುಸುಕಿನ ಜಾವ 3:30 ಅಥವಾ 4 ರ ಸರಿಸುಮಾರು ಇಬ್ಬರು ಕಳ್ಳರು ಬಂದು ದೇವಸ್ಥಾನದಲ್ಲಿರುವ 14 ತೊಲೆ ಬಂಗಾರ ಮತ್ತು 2 ಕೆಜಿ ಬೆಳ್ಳಿಯನ್ನು ಎಗರಿಸಿದ್ದಾರೆ.
ಪ್ರಕರಣ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸ್ ಇಲಾಖೆ ಅವರನ್ನು ಹುಡುಕುವಲ್ಲಿ ಅಲರ್ಟ್ ಆಗಿದೆ. ದೇವಸ್ಥಾನವನ್ನು ಬಿಡದ ಜನ ಜನರನ್ನ ಬಿಡುವರೇ? ಎಂಬ ಪ್ರಶ್ನೆ ಗ್ರಾಮದ ಜನತೆಗೆ ನಿದ್ದೆಗೆಧಿಸಿದಂತಾಗಿದೆ.
ವರದಿ: ವಿನಾಯಕ ಗುಡ್ಡದಕೇರಿ




