ಸೇಡಂ: ತಾಲೂಕಿನ ಕಿಷ್ಟಪುರ ಗ್ರಾಮದಲ್ಲಿ ಹಾಡುಹಗಲೇ ಕಳ್ಳತನ ಆಗಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ ಪ್ರಕರಣ ಮುಧೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕಿಷ್ಟಪುರ ಗ್ರಾಮದಲ್ಲಿ ಮನೆ ಕಳ್ಳತನ ರೈತ ಕುಟುಂಬಗಳಿಗೆ ಆರ್ಥಿಕ ನಷ್ಟ ಸೇಡಂ ತಾಲ್ಲೂಕಿನ ಕಿಷ್ಟಪುರ ಗ್ರಾಮದಲ್ಲಿ ಇತ್ತೀಚೆಗೆ ಎರಡು ಮನೆಗಳಲ್ಲಿ ನಡೆದ ಕಳ್ಳತನದ ಘಟನೆಯು ಗ್ರಾಮಸ್ಥರಲ್ಲಿ ಆತಂಕ ಹುಟ್ಟಿಸಿದೆ.
ಈ ಮನೆಯೊಳಗೆ ಕಳ್ಳರು ನುಗ್ಗಿ ಸುಮಾರು ಎರಡು ತೋಳಿ ಬಂಗಾರ, ಹತ್ತು ತೋಳಿ ಬೆಳ್ಳಿ ಹಾಗೂ ರೂ. 20,000 ನಗದು ಹಣವನ್ನು ಕಳವು ಮಾಡಿದ್ದಾರೆ.
ಈ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ, ಅನಿಲ್ ಇಟ್ಕಲ್, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇಡಂ ತಾಲ್ಲೂಕು ಅಧ್ಯಕ್ಷರು ಕಿಷ್ಟಪುರ ಗ್ರಾಮಕ್ಕೆ ಭೇಟಿ ನೀಡಿ, ಭದ್ರತೆ ತಪ್ಪಿದ ಮನೆಗಳಿಗೆ ಭೇಟಿ ನೀಡಿದರು ಹಾಗೂ ಪೀಡಿತ ಕುಟುಂಬಗಳೊಂದಿಗೆ ಮಾತುಕತೆ ನಡೆಸಿದರು.
ಇಂತಹ ಕಳ್ಳತನಗಳು ಗ್ರಾಮೀಣ ಭಾಗದಲ್ಲಿ ಭದ್ರತೆ ಕೊರತೆಯನ್ನೂ ಉಂಟುಮಾಡುತ್ತಿವೆ ಹಾಗೂ ರೈತರು, ಸಾಮಾನ್ಯ ಜನರಿಗೆ ಆಗುವ ಆರ್ಥಿಕ ಹಾನಿಯನ್ನೂ ತೋರಿಸುತ್ತವೆ. ಇಂತಹ ಸಮಯದಲ್ಲಿ ಗ್ರಾಮಸ್ಥರು ಅಧಿಕಾರಿಗಳಿಗೆ ತಕ್ಷಣ ಮಾಹಿತಿ ನೀಡುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ನಂತರ ಪೋಲಿಸ್ ಇಲಾಖೆಯೊಂದಿಗೆ ಸಂಪರ್ಕದಲ್ಲಿ ಮಾತನಾಡಿ ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಿ ಆರೋಪಿಗಳನ್ನು ಶೀಘ್ರ ಬಂಧಿಸಲು ಕೋರಿದರು ಹಸಿರು ಸೇನೆ ಗ್ರಾಮೀಣ ಶಾಂತಿಯ ಸ್ಥಾಪನೆಗೆ ಸದಾ ಬದ್ಧವಾಗಿದೆ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು, ಅನುಮಾನಾಸ್ಪದ ಚಟುವಟಿಕೆಗಳನ್ನು ತಕ್ಷಣ ಸ್ಥಳೀಯ ಅಧಿಕಾರಿಗಳಿಗೆ ಅಥವಾ ಹಸಿರು ಸೇನೆಯ ಸದಸ್ಯರಿಗೆ ಮಾಹಿತಿ ನೀಡಬೇಕು ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಪೊಟೇಲಿ ಇಟ್ಕಲ್, ಕಾರ್ಯಾಧ್ಯಕ್ಷರಾದ ಸಾಬಪ್ಪ ಅಬ್ಬಗಳ, ಗ್ರಾಮದ ಮುಖಂಡರಾದ ನರಸಪ್ಪ ಕೊಸ್ಕಿ, ಹಾಗೂ ಕಳ್ಳತನ ಆಗಿರುವ ಮನೆಯ ಸದ್ಯಸ್ಯರು ಮತ್ತು ಗ್ರಾಮಸ್ಥರು ಇದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




