ಬೆಂಗಳೂರು : ನನ್ನ ವಿರುದ್ಧ 17 ಕೇಸ್ ಇದೆ, ಇನ್ನೂ ಹಾಕೋಕೆ ಹೇಳಿ ಆದ್ರೆ ದಾರಿ ತಪ್ಪಿಸಬೇಡಿ ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ‘ನಮ್ಮ ಸಿದ್ದರಾಮಯ್ಯ ‘ ಹೆಸರಿನ ಫೇಸ್ ಬುಕ್ ಪೋಸ್ಟ್ ಗೆ ಅವರು ತಿರುಗೇಟು ನೀಡಿದ್ದಾರೆ.
”ಎರಡು ಮತ್ತು ಮೂರು ವರ್ಷಗಳ ಹಳೆ ಹೇಳಿಕೆಗಳನ್ನು Cut and Paste ಮಾಡಿ, ದ್ವೇಷ ಭಾಷಣ ಪ್ರತಿಬಂಧಕ ಕಾಯಿದೆಗೆ ಪ್ರತಾಪ್ ಸಿಂಹ ಹೆದರಿದ್ದಾನೆ ಎಂದು ಅಪಪ್ರಚಾರ ಮಾಡುತ್ತಿರುವ ಮಹಾನುಭಾವರೇ, ಕೇರಳ ಮುಖ್ಯಮಂತ್ರಿಯ ಟ್ವೀಟ್ ಮತ್ತು ಜನರಲ್ ಸೆಕ್ರೆಟರಿ ವೇಣುಗೋಪಾಲ್ ಗೆ ಹೆದರಿ ಅಕ್ರಮ ವಲಸಿಗರಿಗೆ ಮನೆ ಕೊಡಲು ಹೊರಟಿರುವ ಪುಕ್ಕಲ ಮುಖ್ಯಮಂತ್ರಿಗೆ ಹೆದರುವವನು ನಾನಲ್ಲ. ನನ್ನ ವಿರುದ್ಧ ಪ್ರಸ್ತುತ 17 ಕೇಸುಗಳಿವೆ, ಇನ್ನೂ ಹಾಕೋಕೆ ಹೇಳಿ, ಆದರೆ ದಾರಿ ತಪ್ಪಿಸಬೇಡಿ” ಎಂದು ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.




