ಭಾರತದಲ್ಲಿ ಪಿರಿಯಡ್ಸ್ ಕುರಿತು ಹಲವಾರು ಮೂಢನಂಬಿಕೆಗಳಿವೆ. ಆದರೆ, ಇದು ನಮ್ಮ ದೇಶದಲ್ಲಿ ಮಾತ್ರವಲ್ಲ, ಇತರ ದೇಶಗಳಲ್ಲೂ ಪಿರಿಯಡ್ಸ್ ಕುರಿತು ಏನೇನೋ ನಂಬಿಕೆಗಳಿವೆ. ಅವುಗಳ ಬಗ್ಗೆ ತಿಳಿಯೋಣ.
ಪಿರಿಯಡ್ಸ್ ಕುರಿತು ಮೂಢ ನಂಬಿಕೆಗಳು ಇರೋದು ಭಾರತದಲ್ಲಿ ಮಾತ್ರ ಅಲ್ಲ, ಬೇರೆ ಬೇರೆ ದೇಶಗಳಲ್ಲಿ ಋತುಚಕ್ರ ಅಥವಾ ಪಿರಿಯಡ್ಸ್ (periods) ಕುರಿತು ವಿವಿಧ ರೀತಿಯ ನಂಬಿಕೆಗಳಿವೆ. ಆ ವಿವಿಧ ನಂಬಿಕೆಗಳ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನಿಮಗಾಗಿ.
ಯುಎಸ್’ಎ
ಯುಎಸ್’ಎ ನಲ್ಲಿ (USA) ಪಿರಿಯಡ್ಸ್ ಸಮಯದಲ್ಲಿ ಸ್ನಾನ ಮಾಡಬಾರದು ಎನ್ನಲಾಗುತ್ತದೆ. ಯಾಕಂದ್ರೆ ಇದರಿಂದ ಟ್ಯಾಂಪೂನ್ ಕನ್ಯಾ ಪೊರೆಯನ್ನು ಹರಿಯುತ್ತದೆ, ಇದರಿಂದ ಹೆಣ್ಣು ಮಕ್ಕಳು ಅಪವಿತ್ರರಾಗುತ್ತಾರೆ ಎನ್ನುವ ನಂಬಿಕೆ ಜನರಲ್ಲಿದೆ.
ಇಸ್ರೇಲ್
ಇಸ್ರೇಲ್ (Israel ) ನಲ್ಲಿ ಕೆಲವು ಹುಡುಗಿಯರಿಗೆ ಪಿರಿಯಡ್ಸ್ ನ ಮೊದಲ ದಿನ ಕೆನ್ನೆಗೆ ಏಟು ಕೊಡುತ್ತಾರೆ. ಇದರಿಂದ ಜೀವನ ಪೂರ್ತಿ ಕೆನ್ನೆ ಕೆಂಪಾಗಿರುತ್ತೆ ಎನ್ನುವ ನಂಬಿಕೆ.
ಭಾರತ
ಭಾರತದಲ್ಲಿ (India) ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರನ್ನು ದೇವಸ್ಥಾನಕ್ಕೆ ಪ್ರವೇಶಿಸುವುದರಿಂದ ಹಾಗೂ ಕಿಚನ್ ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಈ ಸಮಯದಲ್ಲಿ ಆಕೆಯನ್ನು ಅಪವಿತ್ರ ಎನ್ನಲಾಗುತ್ತೆ.
ಮಲೇಶಿಯಾ
ಮಲೇಶಿಯಾದಲ್ಲಿ (Malesia) ಪಿರಿಯಡ್ಸ್ ಪ್ಯಾಡ್ ಗಳನ್ನು ವಾಶ್ ಮಾಡಿ, ಬಿಸಾಕಬೇಕು.ಇಲ್ಲವಾದರೆ ಭೂತದ ಕಾಟ ಶುರುವಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅಲ್ಲಿ ಪ್ಯಾಡ್ ವಾಶ್ ಮಾಡಿ ಬಿಸಾಕುತ್ತಾರೆ.
ಫ್ರಾನ್ಸ್
ಫ್ರಾನ್ಸ್ ನಲ್ಲಿ (France) ಪಿರಿಯಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳು ಮಯೋನೀಸ್ (Mayonnaise) ಮಾಡುವ ಹಾಗಿಲ್ಲ. ಯಾಕಂದ್ರೆ ಈ ಸಮಯದಲ್ಲಿ ಅವರು ಮಯೋನೀಸ್ ಮಾಡೋದ್ರಿಂದ ಅದು ಹೆಪ್ಪು ಗಟ್ಟಿ ಹಾಳಾಗುವ ಸಾಧ್ಯತೆ ಇದೆ ಎನ್ನುವ ನಂಬಿಕೆ ಇದೆ.
ಬ್ರೆಜಿಲ್
ಬ್ರೆಜಿಲ್ ನಲ್ಲಿ (Brazil) ಪಿರಿಯಡ್ಸ್ ಸಮಯದಲ್ಲಿ ಬರಿಗಾಲಲ್ಲಿ ನಡೆಯೋದರಿಂದ ಕ್ರಾಂಪ್ಸ್ ಹಾಗೂ ಭವಿಷ್ಯದಲ್ಲಿ ಫರ್ಟಿಲಿಟಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತೆ.
ಫಿಲಿಪೈನ್ಸ್
ಫಿಲಿಪೈನ್ಸ್ ನಲ್ಲಿ (Philippines) ಸಣ್ಣ ಹುಡುಗಿಯರಿಗೆ ತಮ್ಮ ಪಿರಿಯಡ್ಸ್ ರಕ್ತದಲ್ಲಿ ಮುಖವನ್ನು ವಾಶ್ ಮಾಡುವಂತೆ ಸೂಚಿಸಲಾಗುತ್ತದೆ. ಇದರಿಂದ ಮುಖದ ತ್ವಚೆ ಕ್ಲಿಯರ್ ಆಗುತ್ತದೆ ಎನ್ನುವ ನಂಬಿಕೆ ಇದೆ.