Ad imageAd image

ಕಲೆಕ್ಷನ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಎರಡು ಮಂಗಳಮುಖಿಯರು  

Bharath Vaibhav
ಕಲೆಕ್ಷನ್‌ ವಿಚಾರಕ್ಕೆ ನಡುರಸ್ತೆಯಲ್ಲೇ ಎರಡು ಮಂಗಳಮುಖಿಯರು  
WhatsApp Group Join Now
Telegram Group Join Now

ಮೈಸೂರು: ಕಲೆಕ್ಷನ್‌ ವಿಚಾರಕ್ಕೆ ಎರಡು ಮಂಗಳಮುಖಿಯರ ಗುಂಪು ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ಘಟನೆ ಬಗ್ಗೆ ದೇವರಾಜ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ನಾಲ್ಕು ದಿನಗಳ ಹಿಂದೆ ನಗರದ ಸಿಟಿ ಬಸ್‌ ನಿಲ್ದಾಣದ ಬಳಿ ಜಗನ್ಮೋಹನ ಅರಮನೆ ಬಳಿ ಘಟನೆ ನಡೆದಿದೆ. ಭಿಕ್ಷೆ ಬೇಡುವ ವಿಚಾರವಾಗಿ ಮಂಗಳಮುಖಿಯರ ಎರಡು ಗುಪುಗಳ ನಡುವೆ ಗಲಾಟೆ ನಡೆದಿದೆ.

ಒಂದು ಕಡೆಯ ಏರಿಯಾಗೆ ಮತ್ತೊಂದು ಮಂಗಳಮುಖಿಯರ ಗುಂಪು ಬಂದು ಭಿಕ್ಷೆ ಬೇಡುತ್ತಿದ್ದಾರೆ ಎಂದು ನಡು ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.

ವೈರಲ್‌ ವಿಡಿಯೋದಲ್ಲಿ ಮಂಗಳಮುಖಿಯರ ಗುಂಪು ಓರ್ವ ಮಂಗಳಮುಖಿಯ ಮೇಲೆ ಹಲ್ಲೆ ನಡೆಸಿ, ವಿವಸ್ತ್ರಗೊಳಿಸಿರುವುದು ಕಂಡುಬಂದಿದೆ.

ರಸ್ತೆಯಲ್ಲಿ ಬಿದ್ದುಕೊಂಡಿದ್ದ ಮಂಗಳಮುಖಿಯನ್ನು ಮತ್ತಿಬ್ಬರು ಮಂಗಳಮುಖಿಯರು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಇದರ ಹಿಂದುಗಡೆ ಇನ್ನಷ್ಟು ಮಂಗಳಮುಖಿಯರು ಬಡಿದಾಡಿಕೊಂಡಿದ್ದಾರೆ.

ಘಟನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಅವರನ್ನು ಸಮಾಧನಾಪಡಿಸಲು ಸ್ಥಳೀಯರು ಪ್ರಯತ್ನಸಿದರೂ ಸಾಧ್ಯವಾಗದೇ ಹೋಗಿದ್ದು, ಬಳಿಕ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಐವರು ಮಂಗಳಮುಖಿಯರನ್ನು ವಶಕ್ಕೆ ಪಡೆದು, ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ನೀಡಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!