Ad imageAd image

ಚಿಕ್ಕೋಡಿ ಹೊಸ ಜಿಲ್ಲೆ ರಚನೆ ಒತ್ತ್ತಾಯಿಸಿ ಬರುವ 8 ಡಿಸೆಂಬರದಿoದ ರಿಂದ ಬೃಹತ ಹೋರಾಟ

Bharath Vaibhav
ಚಿಕ್ಕೋಡಿ ಹೊಸ ಜಿಲ್ಲೆ ರಚನೆ ಒತ್ತ್ತಾಯಿಸಿ ಬರುವ 8 ಡಿಸೆಂಬರದಿoದ ರಿಂದ ಬೃಹತ ಹೋರಾಟ
WhatsApp Group Join Now
Telegram Group Join Now

ಚಿಕ್ಕೋಡಿ:  ಈ ಕುರಿತು ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯ ಎಲ್ಲ ಶಾಸಕರು ಸದನದಲ್ಲಿ ಸರ್ಕಾರಕ್ಕೆ ಒತ್ತಾಯಿಸಬೇಕು, ಇಲ್ಲಾಂದರೆ ಕಿತ್ತೂರ ಕರ್ನಾಟಕ ರಾಜ್ಯ ಪ್ರತ್ಯೇಕ ರಾಜ್ಯ ಒತ್ತಾಯ ಮಾಡುತ್ತೇವೆ ಎಂದು ಚಿಕ್ಕೋಡಿ ಶ್ರೀ ಸಂಪಾದನಾ ಮಹಾಸ್ವಾಮೀಜಿ ಹೇಳಿದರು.

ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು,
ಕಳೆದ ಅನೇಕ ದಶಕಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ನಡೆದಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳಕರ ಜಿಲ್ಲೆಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ. ಇವಾಗ ಅಧಿವೇಶನದಲ್ಲಿ ಘೋಷನೆ ಆಗ್ಬೇಕು.
ಅದೇ ರೀತಿ ಈ ಕುರಿತು ಚಿಕ್ಕೋಡಿ ಜಿಲ್ಲೆಯ ಎಲ್ಲ ಸ್ವಾಮೀಜಿಗಳು ಹಾಗೂ ಜಿಲ್ಲಾ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೇಟಿ ಅಗಲಿದ್ದೇವೆ.
ಜಿಲ್ಲೆ ರಚನೆ ಆದರೆ ಅಥಣಿ ಸೇರಿದಂತೆ ಗಡಿ ಭಾಗದ ಜನರಿಗೆ ಸಹಾಯವಾಗಲಿದೆ ಎಂದು ಹೇಳಿದರು.

ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಸಂಜು ಬಡಿಗೇರ ಮಾತನಾಡಿ ಕಳೆದ 30 ವರ್ಷಗಳಿಂದ ಹೋರಾಟ ಮಾಡ್ತಾ ಇದ್ದೇವಿ. ಆದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ಸರ್ಕಾರ ಅಶ್ವಾಸನೆ ನೀಡುತ್ತದೆ. ಅಧಿವೇಶನ ಹಿನ್ನೆಲೆಯಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಜಿಲ್ಲಾ ಹೋರಾಟ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ ಮಾತನಾಡಿ ಕೇಂದ್ರ ಸರಕಾರದ ಸೂಚನೆಗೆ ಅನುಸಾರ 31 ಡಿಸ್ಸೆಂಬರ ಒಳಗೆ ಹೊಸ ಜಿಲ್ಲೆಗಳ ರಚನೆ ಮಾಡಬೇಕಾಗಿದೆ. ಹೀಗಾಗಿ ಸರ್ಕಾರ ತಕ್ಷಣ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕು. ಬರುವ 8 ದಿಸ್ಸೆಂಬರ ರಿಂದ ಚಿಕ್ಕೋಡಿಯಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂತೋಷ್ ಪೂಜಾರಿ, ಶಂಕರ್ ಅವಾಡಖಾನ್, ರುದ್ರಯ್ಯ ಹಿರೇಮಠ್, ದುರದುಂಡಿ ಬಡಿಗೇರ್, ಕಣಪ್ಪ ಬಾಡಕರ, ಅಜ್ಜಪ್ಪ ವಗ್ಗೆ, ಅನಿಲ್ ನಾವಿ, ಪ್ರತಾಪ್ ಪಾಟೀಲ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!