Ad imageAd image

ಅಳೋದ್ರಿಂದಲೂ ಸಾಕಷ್ಟು ಪ್ರಯೋಜನವಿದೆ

Bharath Vaibhav
ಅಳೋದ್ರಿಂದಲೂ ಸಾಕಷ್ಟು ಪ್ರಯೋಜನವಿದೆ
WhatsApp Group Join Now
Telegram Group Join Now

ಕೆಲವರು ಸಣ್ಣಪುಟ್ಟ ವಿಷಯಗಳಿಗೆ ಸಿಕ್ಕಾಪಟ್ಟೆ ಅಳುತ್ತಾರೆ. ಹಲವರು ಈ ಅಳೋದನ್ನು ದೌರ್ಬಲ್ಯದ ಸಂಕೇತ ಅಂತಾರೆ. ಆದ್ರೆ ಏನ್‌ ಗೊತ್ತಾ, ಅಳೋದ್ರಿಂದ ಸಾಕಷ್ಟು ಪ್ರಯೋಜನಗಳು ಕೂಡ ಇವೆಯಂತೆ. ನಕ್ಕರೆ ಆಯಸ್ಸು ಹೆಚ್ಚಾಗುತ್ತೆ ಅಂತ ಹೇಳ್ತಾರೆ ಅಲ್ವಾ, ಅದೇ ರೀತಿ ಅಳುವುದರಿಂದಲೂ ಹಲವಾರು ಲಾಭಗಳಿವೆ. ಅವು ಏನೆಂಬುದನ್ನು ನೋಡೋಣ ಬನ್ನಿ.

ಅಳುವುದು ((crying) ಒಂದು ಸಹಜ ಕ್ರಿಯೆಯಾಗಿದ್ದು, ನಗುವಿನ ಹಾಗೆ ಅಳುವ ಮೂಲಕವು ಜನ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಕೋಪ, ದುಃಖ, ಹತಾಶೆಯ ಭಾವನೆಗಳನ್ನು ಉಂಟಾದಾಗ ಕೆಲವರು ಜೋರಾಗಿ ಅತ್ತು ಬಿಡುತ್ತಾರೆ, ಇನ್ನೂ ಕೆಲವರು ಸಣ್ಣಪುಟ್ಟ ವಿಷಯಗಳಿಗೂ ಅಳುವುದುಂಟು. ಜನ ಹೆಚ್ಚಾಗಿ ಅಳುವುದನ್ನು ದೌರ್ಬಲ್ಯದ ಸಂಕೇತ ಅಂತ ಹೇಳ್ತಾರೆ. ಆದ್ರೆ ನಿಮ್ಗೊತ್ತಾ ಇದು ದೌರ್ಬಲ್ಯದ ಸಂಕೇತ ಅಲ್ವೇ ಅಲ್ಲಾ. ಅಳುವುದು ದೇಹ ಮತ್ತು ಮನಸ್ಸು ಎರಡಕ್ಕೂ ಒಳ್ಳೆಯದು. ಹೌದು ಮನಸಾರೆ ನಗುವುದರಿಂದ ಎಷ್ಟೆಲ್ಲಾ ಪ್ರಯೋಜಗಳಿವೆಯೋ ಅದೇ ರೀತಿ ಅತ್ತು ದುಃಖವನ್ನು ಹೊರ ಹಾಕುವ ಮೂಲಕವು ಸಾಕಷ್ಟು ಪ್ರಯೋಜನಗಳು ಲಭಿಸುತ್ತವೆ. ಹಾಗಿದ್ರೆ ಅಳುವುದರಿಂದ ((Benefits of crying) ಏನೆಲ್ಲಾ ಲಾಭವಿದೆ ಎಂಬುದನ್ನು ನೋಡೋಣ.

ಅಳುವುದರಿಂದ ಸಿಗುವ ಪ್ರಯೋಜನಗಳು:

ಒತ್ತಡವನ್ನು ಕಡಿಮೆ ಮಾಡುತ್ತದೆ:
ಅಳುವುದು ದೌರ್ಬಲ್ಯವಲ್ಲ ಇದು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಒಬ್ಬ ವ್ಯಕ್ತಿಯು ತುಂಬಾ ಒತ್ತಡದಲ್ಲಿದ್ದಾಗ, ಅವನ ಮೆದುಳು ಸಹ ಒತ್ತಡಕ್ಕೆ ಒಳಗಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಳುವ ಮೂಲಕ ಮೆದುಳಿನ ಒತ್ತಡವನ್ನು ನಿವಾರಿಸಬಹುದು. ಅಳುವಾಗ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್ ರಾಸಾಯನಿಕಗಳು ಬಿಡುಗಡೆಯಾಗುತ್ತವೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮಾನಸಿಕ ಒತ್ತಡ ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಅಳುವಾಗ ಕಾರ್ಟಿಸೋಲ್‌ ಹಾರ್ಮೋನು ಕಣ್ಣೀರಿನ ಮೂಲಕ ಹೊರ ಬರುತ್ತದೆ ಇದು ಒತ್ತಡವನ್ನು ಕಡಿಮೆ ಮಾಡುತ್ತದೆ.

ಕಣ್ಣುಗಳು ಸ್ವಚ್ಛವಾಗುತ್ತದೆ:
ಅಳುವುದರಿಂದ ಕಣ್ಣು ಸ್ವಚ್ಛವಾಗುತ್ತದೆ. ಯಾವುದೇ ಕಸ, ಧೂಳು ಅಥವಾ ಇನ್ನೇನಾದರೂ ನಿಮ್ಮ ಕಣ್ಣಿಗೆ ಬಿದ್ದರೆ, ನಿಮ್ಮ ಕಣ್ಣುಗಳಿಂದ ಕಣ್ಣೀರು ಬರಲು ಪ್ರಾರಂಭಿಸುತ್ತದೆ. ಅದೇ ರೀತಿ, ಅಳುವಾಗಲೂ ಬರುವ ಕಣ್ಣೀರಿನಿಂದ ಕಣ್ಣು ಶುದ್ಧವಾಗುತ್ತವೆ. ವಾಸ್ತವವಾಗಿ, ಕಣ್ಣೀರು ಒಂದು ರೀತಿಯ ಕಿಣ್ವವನ್ನು ಹೊಂದಿರುತ್ತದೆ, ಇದನ್ನು ಲೈಸೋಜೈಮ್ ಎಂದು ಕರೆಯಲಾಗುತ್ತದೆ. ಇದು ಬ್ಯಾಕ್ಟೀರಿಯಾ ಇತ್ಯಾದಿಗಳನ್ನು ಕೊಲ್ಲುತ್ತದೆ ಮತ್ತು ಇದು ಕಣ್ಣಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ನೋವಿನಿಂದ ಪರಿಹಾರ ನೀಡುತ್ತದೆ
ಕಣ್ಣೀರು ಸುರಿಸುವುದರಿಂದ ಆಕ್ಸಿಟೋಸಿನ್ ಮತ್ತು ಎಂಡಾರ್ಫಿನ್‌ಗಳಂತಹ ಒಳ್ಳೆಯ ಭಾವನೆಯ ಹಾರ್ಮೋನುಗಳು ಬಿಡುಗಡೆಯಾಗುತ್ತವೆ, ಇದು ಮಾನಸಿಕ ಮಾತ್ರವಲ್ಲದೆ ದೈಹಿಕ ನೋವನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅತ್ತ ನಂತರ ನಮಗೆ ಹಗುರ ಮತ್ತು ನಿರಾಳತೆಯ ಅನುಭವವಾಗುವುದು.

ಸರಿಯಾದ ನಿದ್ರೆ:
ಒತ್ತಡದಲ್ಲಿದ್ದಾಗ ಮನುಷ್ಯನಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅತ್ತು ಕಣ್ಣೀರು ಹೊರ ಹಾಕಿದರೆ ಒತ್ತಡ ಮತ್ತು ನೋವು ಕಡಿಮೆಯಾಗುತ್ತದೆ. ಜೊತೆಗೆ ಚೆನ್ನಾಗಿ ನಿದ್ರೆಯೂ ಬರುತ್ತದೆ.

ಹಗುರು ಭಾವನೆ:
ಅಳಬೇಕು ಅನಿಸಿದಾಗೆಲ್ಲಾ ಅತ್ತು ಬಿಡಿ. ಇದು ನಿಮ್ಮ ಮನಸ್ಸನ್ನು ಹಗುರುಗೊಳಿಸಲು ಸಹಕಾರಿಯಾಗಿದೆ. ಅತ್ತಾಗ, ಮನಸ್ಸಿನಿಂದ ನೋವು ಹೊರ ಹೋಗಿ ದೇಹ ಹಾಗೂ ಮನಸ್ಸು ಹಗುರವಾದಂತೆ ಭಾಸವಾಗುತ್ತದೆ. ಒಟ್ಟಾರೆಯಾಗಿ ಅಳುವುದರಿಂದ ಭಾವನಾತ್ಮಕ ಹೊರೆ ಕಡಿಮೆಯಾಗಿ ಮನಸ್ಸು ಹಗುರವಾಗುತ್ತದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!