ವಿಜಯಪುರ:- ಧೂಳಖೇಡ್ ಆರ್ ಟಿ ಒ ಚೆಕ ಪೋಸ್ಟ್ ನಲ್ಲಿ ಬಾರಿ ಪ್ರಮಾಣದಲ್ಲಿ ಗೂಂಡಾಗಿರಿ ಭ್ರಷ್ಟಾಚಾರ ನಡೆಸುತ್ತಿರುವ ಆರ್ ಟಿ ಓ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸ್ಥಳೀಯ ಗೂಂಡಾಗಳು.
ದಿನಕ್ಕೆ ಸಾವಿರಾರು ಗಾಡಿಗಳು ಓಡಾಡುತ್ತಿವೆ ನಮ್ಮ ರಾಜ್ಯದ ಹಾಗೂ ದೇಶಾದ್ಯಂತ ಓಡಾಡುವ ಎಲ್ಲಾ ವಾಹನ ಮಾಲಿಕರಿಂದ, ಮತ್ತು ವಾಹನ ಚಾಲಕರಿಂದ ಸಿಕ್ಕಾಪಟ್ಟೆ ಮನ ಬಂದಂತೆ 100/,200/,500/,1000/,5000/,10,0000/,25,000/ರಿಂದ ವ್ಯವಹಾರಗಳಿಗೆ ಸಂಬಂಧಿಸಿದಂತೆ 50 ಸಾವಿರ ರೂಪಾಯಿ ಯಿಂದ 1 ಲಕ್ಷ,2 ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ
ಒಂದು ದಿನಕ್ಕೆ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಬ್ರಷ್ಟ ಭೀಕಾರಿ ಅಧಿಕಾರಿಗಳು. ಹಾಗೂ ಸ್ಥಳೀಯ ಶಾಸಕರಾದ ಶ್ರೀ ಯಶವಂತರಾಯ್ ಪಾಟೀಲರಿಗೆ, ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಯವರಿಗೆ,R.T.O ಅಧಿಕಾರಿ ರಾಜೇಶ ರಾಥೋಡ್, ಮತ್ತು ಎಂ ಡಿ ಪಾಟೀಲ ಹಾಗೂ ಇನ್ನುಳಿದ ಹೊರಗುತ್ತಿಗೆ ,
ಒಳಗುತ್ತಿಗೆ, ಸಿಬ್ಬಂದಿ ವರ್ಗದವರು ಈ ಲೂಟಿ ದಂಧೆಗೆ ಸಾಥ ನೀಡಿತ್ತಿದ್ದಾರೆ ಈ ವಿಷಯ ಗೊತ್ತಿದ್ದು ಗೊತ್ತಿಲ್ಲದಂತೆ ಇದ್ದಾರೆ ಯಾಕೆ ಎಂಬ ಪ್ರಶ್ನೆ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ ಅವರಿಗೂ ಕೂಡ ಎಷ್ಟು ಪಾಲು ಸಿಗುತ್ತೆ ಈ ದಂಧಯಲ್ಲಿ ಎಂದು ಹೆಚ್ಚಿನ ತನಿಖೆ ನಡೆಸಿದರೆ ತಿಳಿದು ಬರುತ್ತದೆ.
ಅಲ್ಲದೇ ಸ್ಥಳೀಯ ಪತ್ರಕರ್ತರಿಗೆ, ರಾಜಕೀಯ ಮುಖಂಡರಿಗೆ, ಸಂಘ ಸಂಸ್ಥೆಗಳಿಗೆ ಹಣ ಲೂಟಿ ಮಾಡಿ ಹಂಚಿಕೆ ಯನ್ನು ಅವರಿಗೆ ಪಾಲು ನೀಡುತ್ತಿದ್ದು ಈ ಉದ್ಯೋಗಕ್ಕೆ ಸಾಥ್ ನೀಡುತ್ತಿದ್ದಾರೆ.
ಹಾಗೂ ಅಲ್ಲಿ ಪ್ರಶ್ನೆ ಮಾಡುವ ಜನರಿಗೆ ಹೊಡೆಯುವುದು , ಬಡಿಯುವುದು, ಜೀವಬೆದರಿಕೆ ಹಾಕಿ ಹಲವಾರು ಜನರಿಂದ ಹಣ ಲೂಟಿ ಮಾಡಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.
ಭ್ರಷ್ಟಾಚಾರವು ಒಂದು ರೀತಿಯ ಅಪ್ರಾಮಾಣಿಕತೆ ಅಥವಾ ಕ್ರಿಮಿನಲ್ ಅಪರಾಧವಾಗಿದ್ದು , ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ಕಾನೂನುಬಾಹಿರ ಪ್ರಯೋಜನಗಳನ್ನು ಪಡೆಯಲು ಅಥವಾ ಒಬ್ಬರ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲು ಅಧಿಕಾರದ ಸ್ಥಾನದಲ್ಲಿ ನಿಯೋಜಿಸಲಾಗಿದೆ.
ಭ್ರಷ್ಟಾಚಾರವು ಲಂಚ , ಪ್ರಭಾವ ದಂಧೆ ಮತ್ತು ದುರುಪಯೋಗದಂತಹ ಚಟುವಟಿಕೆಗಳನ್ನು ಒಳಗೊಂಡಿರಬಹುದು , ಹಾಗೆಯೇ ಲಾಬಿಯಂತಹ ಅನೇಕ ದೇಶಗಳಲ್ಲಿ ಕಾನೂನುಬದ್ಧವಾದ ಅಭ್ಯಾಸಗಳನ್ನು ಒಳಗೊಂಡಿರಬಹುದು ಕಛೇರಿ ಹೊಂದಿರುವವರು ಅಥವಾ ಇತರ ಸರ್ಕಾರಿ ಉದ್ಯೋಗಿಗಳು ವೈಯಕ್ತಿಕ ಲಾಭಕ್ಕಾಗಿ ಅಧಿಕೃತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಿದಾಗ ರಾಜಕೀಯ ಭ್ರಷ್ಟಾಚಾರ ಸಂಭವಿಸುತ್ತದೆ ಈ ಜಿಲ್ಲೆಗೆ ಸಂಭಂದ್ ಪಟ್ಟ ಎಲ್ಲಾ ಆಯಾ ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳು ಈ ದಂಧೆಗೆ ಇಳಿದಿರುವ ಬಗ್ಗೆ ಚರ್ಚಾ ಕೂಡಾ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ
ಯಾಕೆ ಲೋಕಾಯುಕ್ತ, ಜಾರಿ ನಿರ್ದೇಶಾಲಯದ ಸಿಬಿಐ ಸೇರಿದಂತೆ ಇವರಿಗೂ ಕೂಡಾ ಇಲ್ಲಿಂದ ಎಷ್ಟು ಪಾಲು ಕಮಿಷನ್ ಹೋಗುತ್ತೆ ಎಂಬ ಪ್ರಶ್ನೆ ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ ಈ ಇಲಾಖೆ ಗಳಿಗೆ ಗೊತ್ತಿದ್ದರೂ ಸುಮ್ನೆ ಯಾಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಇವರ ಪಾಲು ಎಷ್ಟು ಎಂದು ಸಂಶಯ ವ್ಯಕ್ತವಾಗುತ್ತಿದೆ.
ವರದಿ :-ರಾಜು ಮುಂಡೆ