ಸೇಡಂ:- ತಾಲೂಕಿನ ರಂಜೋಳ ಗ್ರಾಮದ ನೀರಿನ ಟ್ಯಾಂಕ್ ಹತ್ತಿರ ಬಾರ ಹಿಮಮ್ ದರ್ಗಾ ಪಕ್ಕದಲ್ಲಿ ಸಾರ್ವಜನಿಕರಿಗೆ ಓಡಾಡುವ ಸ್ಥಳದಲ್ಲಿ ಬಹಳ ಹದಗೆಟ್ಟಿರುವ ನೀರು ರಸ್ತೆಗೆ ಬಂದು ಸಾರ್ವಜನಿಕರಿಗೆ ತಿರುಗಾಡಲು ತುಂಬಾ ತೊಂದರೆಯಾಗಿದೆ.
ಅಷ್ಟೇ ಅಲ್ಲದೆ ದುರ್ವಾಸನೆಯಿಂದ ಡೆಂಗ್ಯೂ ಮಹಾಮಾರಿಯಂತ ಅಪಾಯಕಾರಿ ರೋಗಗಳು ಬಂದು ತೊಂದರೆಯಾಗುತ್ತಿದೆ.ಇದರ ಕುರಿತು ಅನೇಕ ಬಾರಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು ಇತ್ತ ಕಡೆ ಗಮನ ಕೊಡುತ್ತಿಲ್ಲ ಎಂದು ಗ್ರಾಮ ನಿವಾಸಿ ನಿರಂಜನ್ ಬೊಂಬಾಯಿ ವ್ಯಕ್ತಪಡಿಸಿದರೆ.

ಅತಿ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ನಿರಂಜನ್ ಹೇಳಿಕೆ ನೀಡಿದ್ದಾರೆ.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.




