ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪ್ರಾಣಕ್ಕೂ ಗ್ಯಾರಂಟಿ ಇಲ್ಲದಂತಾಗಿದೆ ರಾಜ್ಯ ಸರ್ಕಾದಲ್ಲಿ ಆಂಬ್ಯುಲೆನ್ಸ್ ಸೇವೆ ಹಾಗೂ ಔಷದಿಗೂ ಹಣವಿಲ್ಲ.
ಪಾವಗಡ: ಪಟ್ಟಣದ ದಿನಾಂಕ 17/03/25 ಸೋಮವಾರ ಭಾರತೀಯ ಜನತಾ ಪಾರ್ಟಿ ವತಿಯಿಂದ ತಾಲ್ಲೂಕಿನ ಆಸ್ಪತ್ರೆಗಳಲ್ಲಿ ವೈದ್ಯರ ನೇಮಸುವುದಕ್ಕೆ ನಿರ್ಲಕ್ಷ್ಯ ಹಾಗೂ ಎಸ್ಸಿ ಎಸ್ಟಿ ಹಣ ದುರ್ಬಳಕೆ ಖಂಡಿಸಿ ನಿರೀಕ್ಷಣ ಮಂದಿರದಿಂದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ವೈದ್ಯರ ಕೊರತೆ ಸೇರಿ ಬಡ ರೋಗಿಗಳಿಗೆ ಉಚಿತ ಆಂಬುಲೆನ್ಸ್ ಸೇವೆ ನೀಡಲು ಸಹ ಅನುದಾನ ಕೊರತೆಯಿಂದಸ್ಥಗಿತಗೊಂಡಿವೆ. ಆಸ್ಪತ್ರೆಗೆ ವೈದ್ಯರಿಲ್ಲದೆ ತಾಲೂಕಿನ ಬಡ ರೋಗಿಗಳ ಪ್ರಾಣಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ತಕ್ಷಣಕ್ಕೆ ವೈಧ್ಯರನ್ನು ನೇಮಿಸಿ, ಪ್ರಾಣ ಉಳಿಸಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಾಗುವುದೆಂದು ರಾಜ್ಯ ಸರ್ಕಾರಕ್ಕೆ ಬಿ.ಜೆ.ಪಿ ತಾಲ್ಲೂಕು ಅಧ್ಯಕ್ಷ ಡಿ.ಅರ್ ಅಶೋಕ್ ಎಚ್ಚರಿಕೆ ನೀಡಿದರು.
ಬಿಜೆಪಿ ಪಕ್ಷದ ಜಿಲ್ಲಾ ಕೋರ್ ಕಮಿಟಿ ಸದಸ್ಯ ವೆಂಕಟರಾಮಯ್ಯ ಮಾತನಾಡಿ ಇಲ್ಲಿ ವೈಧ್ಯರ ಕೊರತೆ ಎದ್ದು ಕಾಣುತ್ತಿದೆ. ತಾಲ್ಲೂಕಿನ ಜನಪ್ರತಿನಿಧಿಗಳು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಕಳೆದ ಎರಡು ವರ್ಷದಿಂದ ವೈಧ್ಯರನ್ನು ನೇಮಿಸದೇ ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಜಿಲ್ಲಾ ಬಿ.ಜೆ.ಪಿ ಮುಖಂಡ ರವಿ ಮಾತನಾಡಿ ಪಾವಗಡ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಹಿಂದೆ ಬಾಣಂತಿಯ ಸಾವನ್ನಪ್ಪಿದ್ದರು. ಇದಕ್ಕೆ ಕಾರಣ ಡಾ.ಕಿರಣ್ ಅಮಾನತ್ತು ಮಾಡಲಾಗಿ ಮತ್ತೆ ತಾಲ್ಲೂಕಿನ ವೈದ್ಯಾಧಿಕಾರಿ ಹುದ್ದೆ ನೀಡಿ. ಡಾ.ಕಿರಣ್ ಆಸ್ಪತ್ರೆಯಲ್ಲಿನ ವೈದ್ಯರ ಹಾಗೂ ಸಿಬ್ಬಂದಿಗಳನ್ನು ಕಿರುಕುಳ ನೀಡಿ ಆಸ್ಪತ್ರೆ ದೊರೆಯುವಂತೆ ಮಾಡಿದ್ದಾರೆ. ರಾಜಕೀಯ ಆಸೆ ಇದ್ದರೆ ತಮಗಿಚ್ಚೆ ಇರುವ ರಾಜಕೀಯ ಪಕ್ಷದ ಧ್ವಜವನ್ನು ಹಿಡಿದು ರಾಜಕೀಯ ಮಾಡಿ ಸಮಾಜ ಸೇವೆ ಮಾಡಲಿ ಅದನ್ನು ಬಿಟ್ಟು ಬಡ ರೋಗಿಗಳ ಪ್ರಾಣದ ಜೊತೆಗೆ ಆಟ ಆಡುವುದು ಸಮಂಜಸವಲ್ಲ ಎಂದು ಡಾಕ್ಟರ್ ಕಿರಣ್ ರವರಿಗೆ ಎಚ್ಚರಿಕೆ ನೀಡಿ.
ಡಾ. ಕಿರಣ್ ಅನ್ನು ತಕ್ಷಣಕ್ಕೆ ಪಾವಗಡದಿಂದ ಬೇರೆಡೆಗೆ ವರ್ಗಾಯಿಸಿ ತಾಲೂಕು ಆಸ್ಪತ್ರೆಗೆ ವೈದ್ಯರನ್ನು ನೇಮಿಸಿ ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಆಸ್ಪತ್ರೆ ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರೇ ಬಿಜೆಪಿ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರಿಂದ ತಹಶಿಲ್ದಾರ್ ಡಿ.ಎನ್. ವರದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿ ಇದ್ದಾರೆ.
ಮನವಿ ಪತ್ರವನ್ನು ತೆಗೆದುಕೊಂಡು ತಹಸಿಲ್ದಾರ್ ವರದರಾಜ ಮಾತನಾಡಿ ಈ ದಿನ ಬಿಜೆಪಿ ಪಕ್ಷದ ವತಿಯಿಂದ ಸರ್ಕಾರಿ ಆಸ್ಪತ್ರೆಯ ಡಾಕ್ಟರ್ ಇಲ್ಲದ ಕಾರಣದಿಂದ ನೀಡಿದ್ದರೂ ನಾನು ಸ್ವೀಕರಿಸಿ ಎಸಿ ಮತ್ತು ಡಿಸಿ ಅಧಿಕಾರಿಗಳಿಗೆ ಪತ್ರಮೂಲಕ ಕಳಿಸುತ್ತೇನೆಂದು ಭರವಸೆ ನೀಡಿದ್ದರು.
ಈ ವೇಳೆ ಬಿಜೆಪಿ ಹಿರಿಯ ಪಕ್ಷದ ಮುಖಂಡರಾದ ಶಿವಕುಮಾರ್ ಸಾಕಿಲ್ಲ. ಮಾದವರಡ್ಡಿ.ಹನುಮಂತ್ ರೆಡ್ಡಿ.ಶ್ರೀರಾಮ್ ಗುಪ್ತ, ಪುರಸಭಾ ಮಾಜಿ ನಾಮಿನಿ ಸದಸ್ಯರಾದ ಪ್ರಸನ್ನ ಕುಮಾರ್. ಗೋಲ್ಡನ್ ಮಂಜುನಾಥ್. ಮಹಾಲಿಂಗಪ್ಪ ಸುಮನ್. ವೆಂಕಟಾಪುರ ಹರೀಶ್. ರಾಮಕೃಷ್ಣ.ಲೋಕೇಶ್ ಇನ್ನು ಹಲವಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಇತರರು ಹಾಜರಿದ್ದರು.
ವರದಿ: ಶಿವಾನಂದ