ಗುಳೇದಗುಡ್ಡ: ತಹಶೀಲ್ದಾರ್ ಕಚೇರಿಯಲ್ಲಿ ಮಾಹಿತಿ ಹಕ್ಕು ನಾಮಫಲಕ ಕಾಣೆಯಾಗಿದ್ದು ಹಾಗೂ ಸಂವಿಧಾನ ಬರೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಸ್ವಾತಂತ್ರ ಹೋರಾಟಗಾರರ ಭಾವಚಿತ್ರ ಒಂದು ಮೂಲೆ ಸೇರಿದೆ ಇದರ ಬಗ್ಗೆ ಅಧಿಕಾರಿಗಳು ಕೇಳಿದರೆ ಸ್ವಚ್ಛತೆಗಾಗಿ ತೆಗೆದಿದ್ದೇವೆ ಎಂದು ಉಡಾಫೆ ಆಗಿ ಉತ್ತರಿಸುತ್ತಾರೆ ಇದಕ್ಕೆ ತಹಶೀಲ್ದಾರ್ ಅವರ ಬಳಿ ಕೇಳಿದರೆ ಎಸ್ ಎಫ್ ಬೊಮ್ಮನ್ನವರ್ ಅವರು ಹೇಳುವ ರೀತಿ ನೋಡಿದರೆ ಹೋದ ತಿಂಗಳು ಸ್ವಚ್ಛತೆಗಾಗಿ ತೆಗೆದಿದ್ದೇವೆ ಎಂದು ಹೇಳುತ್ತಾರೆ ಕಚೇರಿಯ ಮುಂದೆ ಒಂದು ಭ್ರಷ್ಟಾಚಾರ ಬಗ್ಗೆ ಜಾಗೃತಿ ಮೂಡಿಸುವ ಲೋಕಾಯುಕ್ತರ ವಿಳಾಸದ ನಾಮಫಲಕವಾಗಲಿ ಹಾಗೂ ಇಲ್ಲಿನ ಸಿಬ್ಬಂದಿಗಳು ತಮ್ಮ ಐಡಿ ಕಾರ್ಡ್ ಆಗಲಿ ಯಾವುದನ್ನು ಧರಿಸಿರೋದಿಲ್ಲ ಇದರ ಬಗ್ಗೆ ದಲಿತ ಮುಖಂಡರಾದ ಸತೀಶ್ ಮಾದರ ಹಾಗೂ ಈರಪ್ಪ ಮಾದರ್ ಅವರ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು ಇನ್ನಾದರೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸರ್ಕಾರದ ಆದೇಶಕ್ಕೆ ಬೆಲೆ ನೀಡಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.




