ನವದೆಹಲಿ: ಆಗಸ್ಟ್ 21ರಂದು ಇಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ರಿಸರ್ವೇಶನ್ ಬಚಾವೋ ಸಂಘರ್ಷ ಸಮಿತಿ ವತಿಯಿಂದ ಬಂದ್ ಗೆ ಕರೆ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ವಿರೋಧಿಸಿ ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯು ಭಾರತ್ ಬಂದ್ಗೆ ಕರೆ ನೀಡಿದೆ.
ಏನಿರುತ್ತೆ..? ಏನಿಲ್ಲ..
ಆಯಂಬುಲೆನ್ಸ್ ಸೇವೆಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು
ಪೊಲೀಸ್ ಸೇವೆ ಎಂದಿನಂತೆ ಮುಂದುವರಿಯುತ್ತದೆ.
ಅಗತ್ಯ ವೈದ್ಯಕೀಯ ಸೇವೆಗಳು ಮತ್ತು ಔಷಧಿ ಅಂಗಡಿಗಳು ಓಪನ್ ಇರುತ್ತದೆ
ಭಾರತ್ ಬಂದ್ಗೆ ಕರೆ ನೀಡಿದ್ದರೂ ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು, ಶಾಲೆಗಳು, ಕಾಲೇಜುಗಳು, ಪೆಟ್ರೋಲ್ ಪಂಪ್ಗಳು ಕಾರ್ಯನಿರ್ವಹಿಸಲಿವೆ
ಸಾರಿಗೆ ಬಸ್ ಸಂಚಾರ, ಆಟೋ , ಟ್ಯಾಕ್ಸಿ ಬಂದ್ ಆಗುವ ಸಾಧ್ಯತೆಯಿದೆ
ಖಾಸಗಿ ಕಚೇರಿಗಳು ಸಾಮಾನ್ಯವಾಗಿ ಬಾಗಿಲು ಮುಚ್ಚುತ್ತವೆ.
ಈ ಭಾರತ್ ಬಂದ್‌ನ ಮುಖ್ಯ ಉದ್ದೇಶವೆಂದರೆ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸುವುದು ಮತ್ತು ಅದನ್ನು ಹಿಂಪಡೆಯುವಂತೆ ಒತ್ತಾಯಿಸುವುದು. ಈ ಬಂದ್‌ಗೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳ ಬೆಂಬಲ ಸಿಗುವ ನಿರೀಕ್ಷೆಯಿದೆ. ನ್ಯಾಯಾಲಯದ ಅನ್ಯಾಯದ ತೀರ್ಪನ್ನು ಎತ್ತಿ ಹಿಡಿಯುವುದು ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಹೇಳಲಾಗಿದೆ.