Ad imageAd image

ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. : ನಿಜಗುಣಾನಂದ ಶ್ರೀ

Bharath Vaibhav
ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. : ನಿಜಗುಣಾನಂದ ಶ್ರೀ
WhatsApp Group Join Now
Telegram Group Join Now

ಧಾರವಾಡ : ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ ಅಂಬೇಡ್ಕರ್ ಬೇಕು. ದೇಶದ ಪ್ರಧಾನಿ ರಾಮ-ಹನುಮಂತ ತೆಗೆದುಕೊಂಡು ಭಾರತದ ಹೊರಗೆ ಹೋದರೆ ಪ್ರಯೋಜವಿಲ್ಲ. ಭಾರತ ಬಿಟ್ಟು ಹೊರಗೆ ರಾಮ-ಹನಮಂತರನ್ನ ತೆಗೆದುಕೊಂಡು ಹೋದರೆ ಆಗದು ಎಂದು ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.

ಇಂದು ಧಾರವಾಡದಲ್ಲಿ ಲಿಂಗಾಯತ ಭವನದ ನೂತನ ಸಭಾ ಭವನ ಉದ್ಘಾಟನೆ ಬಳಿಕ ಮಾತನಾಡಿದ ಅವರು, ದೇಶ ಪ್ರತಿನಿಧಿಸಬೇಕಾದರೆ ಬುದ್ಧ-ಬಸವ ಅಂಬೇಡ್ಕರ್ ಬೇಕು. ಅವರನ್ನ ತೆಗೆದುಕೊಂಡು ಹೋಗಬೇಕು.

ಏಕೆಂದರೆ ಸಮಾನತೆಗಾಗಿ ಕಾರ್ಯ ಮಾಡಿದವರು ಇವರು. ಆದರೆ ಇಂದು ಬುದ್ಧ ಬಸವ ಅಂಬೇಡ್ಕರ್ ಬದಲಾಗಿ ರಾಮ-ಹನಮಂತರನ್ನ ದೇಶದ ಹೊರಗೆ ಪರಿಚಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಭಾರತದ ಭೂಪಟ ತಿರುಗಿಸಿ ನೋಡಿ ಆಂಧ್ರದಲ್ಲಿ ಸನಾತನ ಧರ್ಮದ ಅಂಧಶ್ರದ್ಧೆ ಇದೆ. ಕೇರಳ ದೇವರ ನಾಡು ಅಲ್ಲಿನವರು ಶೈಕ್ಷಣಿಕವಾಗಿ ಮುಂದುವರಿದಿದ್ದಾರೆ, ಅಷ್ಟೇ ಧರ್ಮದಲ್ಲಿ ಅಂಧ ಶ್ರದ್ಧೆ ಇದೆ. ತಮಿಳನಾಡಿನಲ್ಲಿ ಹೋರಾಟದ ಪ್ರತಿರೂಪದ ವ್ಯವಸ್ಥೆ ಕಂಡುಬರುತ್ತದೆ. ಇನ್ನು ಉತ್ತರ ಭಾರತದಲ್ಲಿ ಅಲ್ಲಿನ ಧಾರ್ಮಿಕ ಮುಖಂಡರು, ಭಕ್ತಿ ಮತ್ತು ಜ್ಞಾನ, ಪ್ರತಿಭೆ ಮೇಲೆ ಸಮಾಜ ಕಟ್ಟಿದ್ದಾರೆ ಎಂದರು.

ಅದೇ ಕರ್ನಾಟಕಕ್ಕೆ ಬಂದು ನೋಡಿ ಕರ್ನಾಟಕದ ಲಿಂಗಾಯತ ರಾಜರು, ಮಠಾಧೀಶರು, ದಾಸೋಹಿಗಳು ಗುಡಿ ಗುಂಡಾರ ಕಟ್ಟಲಿಲ್ಲ. ಬಸವಣ್ಣನವರ ತತ್ವದ ಅನ್ನ, ಅರಿವು, ಆಶ್ರಯ, ದಾಸೋಹ ನೀಡಿದ್ದಾರೆ. ಜಗತ್ತಿಗೆ ಬೇಕಾಗಿರುದನ್ನು ನೀಡಿದ್ದಾರೆ ಎಂದು ನಿಜಗುಣಾನಂದ ಸ್ವಾಮೀಜಿ ನುಡಿದರು.

 

WhatsApp Group Join Now
Telegram Group Join Now
Share This Article
error: Content is protected !!