Ad imageAd image

ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ :ಕೆಲಸ ಕೇಳಿದರೆ ಅಧಿಕಾರಿಗಳಿಂದ ಉಡಪೆ ಉತ್ತರ.

Bharath Vaibhav
ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲ :ಕೆಲಸ ಕೇಳಿದರೆ ಅಧಿಕಾರಿಗಳಿಂದ ಉಡಪೆ ಉತ್ತರ.
WhatsApp Group Join Now
Telegram Group Join Now

ಚಾಮರಾಜನಗರ : ಯಳಂದೂರು. ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿಯಲ್ಲಿ ಕೂಲಿ ಕಾರ್ಮಿಕರಿಂದ ಪ್ರತಿಭಟನೆ. ಕೆಸ್ತೂರು ಗ್ರಾಮದಲ್ಲಿ ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲ, 6 ದಿನ ಕೆಲಸ ಮಾಡಿದರು ಕೂಲಿ ಸಹಾ ನೀಡುತ್ತಿಲ್ಲವೆಂದು ಕೂಲಿ ಕಾರ್ಮಿಕರು ಗ್ರಾಮ ಪಂಚಾಯಿತಿ ಮುಂದೆ ಕೆಲವು ಗಂಟೆಗಳ ಕಾಲ ಪ್ರತಿಭಟನೆ ನೆಡೆಸಿದರು.

ನಿಜವಾದ ಕೂಲಿ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ, ಕೆಸ್ತೂರು ಗ್ರಾಮ ಪಂಚಾಯತಿಯಲ್ಲಿ ಪ್ರತಿದಿನ ನರೇಗಾ ಕೆಲಸಗಳು ನಡೆಯುತ್ತಿದೆ ಆದರೆ ಅದನ್ನು ನಿಜವಾದ ಕೂಲಿ ಕಾರ್ಮಿಕರಿಗೆ ನೀಡುತ್ತಿಲ್ಲ, ಗ್ರಾಮ ಸಭೆಗಳು ನಡೆಯುವ ಸಂದರ್ಭಗಳಲ್ಲಿ ಮಾತ್ರ ಕೆಲವು ದಿನಗಳ ಕಾಲ ಕೆಲಸ ನೀಡುತ್ತಾರೆ ಇಲ್ಲದಿದ್ದರೆ ನರೇಗಾ ಕೆಲಸಗಳನ್ನು ಕೊಡುವುದಿಲ್ಲ, ಕೂಲಿ ಕಾರ್ಮಿಕರು ಕೆಲಸ ಮಾಡಿದ್ದರು ಅವರ ಖಾತೆಯಲ್ಲಿ 0 ಮಾಡಿರುವುದರಿಂದ ಮಹಿಳೆಯರು ಕಂಗಾಲಾಗಿದ್ದಾರೆ, ಪ್ರತಿದಿನ ಕೆಲಸಗಳು ನಡೆಯುತ್ತಿದ್ದರು ನಿಜವಾದ ಹಾಗೂ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರಿಗೆ ನರೇಗಾ ಕೆಲಸ ನೀಡುತ್ತಿಲ್ಲ, ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಕೆಸ್ತೂರು ಗ್ರಾಮದ ರಾಜೇಶ್ ಆರ್. ಮಾತನಾಡಿ ಕೆಸ್ತೂರು ಗ್ರಾಮದಲ್ಲಿ ನರೇಗಾ ಕೆಲಸ ನೆಡಿಯುತ್ತಿದ್ದರು, ನಮಗೆ ಕೆಲಸವಿಲ್ಲ ನಾವು ಕೆಲಸ ಕೇಳಿದರೆ ಬೇರೆ ಗ್ರಾಮಕ್ಕೆ ಹೋಗಿ ಕೆಲಸ ಇದೆ ಹಾಗೂ 6ದಿನದ ಕೂಲಿಯ ದುಡ್ಡು ನಮಗೆ ಕೊಟ್ಟಿಲ್ಲ,ಗ್ರಾಮ ಸಭೆಗಳು ನೆಡೆಯುವ ಮೂರು ನಾಲ್ಕು ದಿನ ಮುಂಚೆ ಅಧಿಕಾರಿಗಳಿಗೆ ಲೆಕ್ಕ ತೋರಿಸಲು ಸ್ವಲ್ಪ ಜನರಿಗೆ ಕೆಲಸ ಕೊಡುತ್ತಾರೆ , ಅಧಿಕಾರಿಗಳನ್ನು ನಾವು ಕೇಳಿದರೆ ದುಡ್ಡು ಬಂದಿಲ್ಲ, NMR ತೆಗೀರಿ ಎಂದು ಕೇಳಿದರೆ ಸರ್ವರ್ ಬಿಜಿ ಇದೆ ಎಂದು ಅಧಿಕಾರಿಗಳು ಉಡಪೆಯ ಉತ್ತರಗಳನ್ನು ನೀಡುತ್ತಾರೆ, ನಮ್ಮ ಊರಿಗೆ ಬರುವ ಎಲ್ಲಾ ಪಿಡಿಓಗಳದ್ದು ಇದೆ ಸ್ಥಿತಿ, ಮಾದಲು ಕೆಸ್ತೂರು ಗ್ರಾಮ ಪಂಚಾಯಿತಿ ಪಿ. ಡಿ. ಓ. ಮಹದೇವಸ್ವಾಮಿ ರವರನ್ನು ಕೆಸ್ತೂರು ಪಂಚಾಯಿತಿಯಿಂದ ಕಲಿಸಬೇಕು ಎಂದು ಪ್ರತಿಭಟಸಿದರು.

ಪ್ರತಿಭಟನೆ ಸ್ಥಳಕ್ಕೆ ಈ ಓ ರವರು ಬಂದು ಕೊಡಲೇ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕಾರ್ಮಿಕರು ಆಕ್ರೋಶ ವ್ಯಕ್ತ ಪಡಿಸಿದರು.ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಎ.ಡಿ. ಕೊಡಲೇ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತಂದು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ತಿಳಿಸುತ್ತೇನೆ ಎಂದರು.ಈ ಸಂದರ್ಭದಲ್ಲಿ ಮಹಿಳೆಯರು, ಕೂಲಿ ಕಾರ್ಮಿಕರು, ಹಾಗೂ ಗ್ರಾಮಸ್ಥರು ಭಾಗವಹಿಸಿದರು.

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!