ಚಿಕ್ಕೋಡಿ:-ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ ಕೇಂದ್ರದ ಬಿಜೆಪಿ ಸರಕಾರ ದೇಶದ ತನಿಖಾ ಸಂಸ್ಥೆಗಳನ್ನು ಹಾಗೂ ರಾಜ್ಯಪಾಲರು ಕಚೇರಿಯನ್ನು ದುರ್ಬಳೆಕೆ ಮಾಡಿಕೊಂಡು ರಾಜಕೀಯ ಹಿತಸಕ್ತಿಗಾಗಿ ಕಾಂಗ್ರೆಸ್ ಪಕ್ಷದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯಾ ಅವರಮೇಲೆ ಪ್ರಾಸಿಕ್ಯೂಶನಗೆ ಅನುಮತಿ ನೀಡಿದ ರಾಜ್ಯಪಾಲ ಗೇಹಲೊಟ ನಡೆವಿರುದ್ಧ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕು.ಪ್ರಿಯಾಂಕ ಸತೀಶ ಜಾರಕಿಹೊಳಿ ಲೋಕಸಭಾ ಸದಸ್ಯರು ಹಾಗೂ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ ರಾಯಬಾಗದ ಕಾಂಗ್ರೆಸ್ ಅಭ್ಯರ್ಥಿ ಅಭ್ಯರ್ಥಿಯಾದ ಶ್ರೀ ಮಹಾವೀರ ಮೋಹಿತೆ ಕೆಪಿಸಿಸಿ ಕಿಸಾನ್ ಘಟಕ ರಾಜ್ಯ ಉಪಾಧ್ಯಕ್ಷರು ಶ್ರೀ ದಸ್ತಗೀರ ರಾಜಿಸಾಬ ಕಾಗವಾಡೆ ಚಿಕ್ಕೋಡಿ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಪಾಟೀಲ್ ಹಾಗೂ ಎಲ್ಲಾ ಬ್ಲಾಕನ ಅಧ್ಯಕ್ಷರು ಉಪಾಧ್ಯಕ್ಷರು ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ:-ರಾಜು ಮುಂಡೆ