Ad imageAd image

ರೇಣುಕಾ ಎಲ್ಲಮ್ಮ ದೇವಸ್ಥಾದಲ್ಲಿ ಕಳ್ಳರ ಹಾವಳಿ

Bharath Vaibhav
ರೇಣುಕಾ ಎಲ್ಲಮ್ಮ ದೇವಸ್ಥಾದಲ್ಲಿ ಕಳ್ಳರ ಹಾವಳಿ
WhatsApp Group Join Now
Telegram Group Join Now

 ಐಗಳಿ: ಅಥಣಿ ತಾಲೂಕಿನ ಸುಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಸರ ಕಳ್ಳರ ಹಾವಳಿ ಹೆಚ್ಚಾಗಿದೆ. ಪ್ರತಿ ಮಂಗಳವಾರ . ಶುಕ್ರವಾರ ಹಾಗೂ ಅಮವಾಸ್ಯೆ,ಹುಣ್ಣಿಮೆಗೆ ದೇವಿ ದರ್ಶನ ಪಡೆಯಲು ಸಾವಿರಾರು ಜನ ಭಕ್ತರು ಕರ್ನಾಟಕ ಮಹಾರಾಷ್ಟ್ರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈದಿನ ಗಳಲ್ಲಿ ಕಳ್ಳರು ತಮ್ಮ ಕೈಚಳ ತೊರಿಸುತ್ತಿದ್ದಾರೆ. ದಿನಾಂಕ 05-07-2024 ರಂದು ಮುಧೋಳ ತಾಲೂಕಿನ ಹೆಬ್ಬಾಳಟ್ಟಿ ಗ್ರಾಮದ ಅಶಾ ಉಮೇಶ ದೊಡಮನಿ ಅವರು ದೇವಿ ದರ್ಶನ ಪಡೆಯಲು ಆಗಮಿಸಿದ್ದರು ದರ್ಶನ ಪಡೆದು ವಾಪಸು ಆಗುವಷ್ಟುರಲ್ಲಿ ಕೊರಳಲ್ಲಿ ಇದ್ದ ಮೂರು ತೊಲೆ ಬಂಗಾರದ ಮಾಂಗಲ್ಯವನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೇರಿಯಾಗಿದೆ. ಹೀಗೆ ಪ್ರತಿ ತಿಂಗಳು ಒಂದಲ್ಲ ಒಂದು ಘಟನೆ ನಡೆಯುತ್ತಿದ್ದು ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಇಲ್ಲಿ ಭದ್ರತೆ ಇಲ್ಲದಂತಾಗಿದೆ. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಆಕಾಶ ಮಾದರ

WhatsApp Group Join Now
Telegram Group Join Now
Share This Article
error: Content is protected !!