ಹಾವೇರಿ: ಹೌದು ಬೈಕಿನಲ್ಲಿ ತೇರಳುತ್ತಿದ್ದ ದಂಪತಿಗಳ ಕಣ್ಣಿಗೆ ಮಣ್ಣೆರಚಿ, ಹಾಡು ಹಗಲೇ ಕಳ್ಳರು ಮಹಿಳೆಯ ಕುತ್ತಿಗೆಗೆ ಕೈಹಾಕಿ ಚಿನ್ನದ ಸರಗಳನ್ನು ಕಿತ್ತು ಕೊಂಡು ಪರಾರಿಯಾದ ಘಟನೆ ಹಾನಗಲ್ ತಾಲೂಕಿನ ಹಾವಣಗಿ ರಸ್ತೆಯಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಅಕ್ಕಿಲೂರು ಗ್ರಾಮದ ನಾಗಪ್ಪ ಸಿದ್ದಪ್ಪ ಕುಬಸದ್, ಪತ್ನಿ ಪುಷ್ಪಾ ದಂಪತಿಗಳು ತಮ್ಮ ಪರಿಚಯಸ್ತರ ಗೃಹ ಪ್ರವೇಶಕ್ಕೆoದು
ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ಇಬ್ಬರು ಖದೀಮರು ತಮ್ಮ ಬೈಕಿನಲ್ಲಿ ಮುಖಕ್ಕೆ ಮಾಸ್ಕನ್ನು ಧರಿಸಿಕೊಂಡು , ದಂಪತಿಗಳ ಬೈಕನ್ನು ಹಾವಣಗಿ ಮಾರ್ಗದ ರಸ್ತೆಯಲ್ಲಿ ಹಿಂಬಾಲಿಸಿ, ದಂಪತಿಗಳ ಬೈಕನ್ನು ಓವರ್ ಟೇಕ್ ಮಾಡಿಕೊಂಡು ಸ್ವಲ್ಪ ದೂರ ಹೋಗಿ ತಮ್ಮ ಬೈಕನ್ನು ನಿಲ್ಲಿದ್ದಾರೆ, ನಂತರ ಹಿಂದೆ ಕುಳಿತಿದ್ದ ವ್ಯಕ್ತಿಯೊಬ್ಬ ಬೈಕಿನಿಂದ ಇಳಿದು, ತನ್ನ ಕೈ ಮುಷ್ಠಿಯಲ್ಲಿ ಮಣ್ಣನ್ನು ತಗೆದುಕೊಂಡು ಬೈಕ್ ಚಲಾಯಿಸಿ ಕೊಂಡುಬರುತ್ತಿದ್ದ ನಾಗಪ್ಪ ಕುಬಸದ್ ರವರ ಕಣ್ಣಿಗೆ ಮಣ್ಣನ್ನು ಎರಚಿದ್ದಾನೆ.
ತಕ್ಷಣ ನಾಗಪ್ಪ ರವರು ತಮ್ಮ ಬೈಕನ್ನು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ , ಬೈಕ್ ನಿಲ್ಲಿಸುತ್ತಿದಂತೆ ದುಷ್ಕರ್ಮಿಯು ನಾಗಪ್ಪ ಪತ್ನಿ ಪುಷ್ಪಾ ರವರ ಕುತ್ತಿಗೆಗೆ ಏಕಾ-ಏಕಿ ಕೈ ಹಾಕಿ ಅವರ ಕತ್ತಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಹಾಗೂ 15 ಗ್ರಾಂ ತೂಕದ ಒಂದು ಚಿನ್ನದ ಚೈನ ಸರ ಸೇರಿದಂತೆ ಒಟ್ಟು 4,40,000 ರೂ ಬೆಲೆ ಬಾಳುವ ಒಡವೆಯನ್ನು ಕಿತ್ತು ಕೊಂಡು ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ..
ಈ ಘಟನೆಗೆ ಸಂಬಂಧಿಸಿದಂತೆ ಹಾನಗಲ್ ಸಿಪಿಐ ಬಸವರಾಜ್ ಹಳಬಣ್ಣನವರ್, ಸೇರಿದಂತೆ ಪಿಎಸ್ಐ ಸಂಪತ್ ಆನಿಕಿವಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನೆಡೆಸಿದ್ದಾರೆ, ಈ ಕೂರಿತು ಆಡೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ಧಾಖಲಾಗಿದೆ.
ವರದಿ: ರಮೇಶ್ ತಾಳಿಕೋಟಿ




