Ad imageAd image

ತಿಂಡಿಗೆ ಬಿದ್ದಾಳ ಹಾದರಗಿತ್ತಿ  : ಅಶ್ಲೀಲ ಹಾಡುಗಾರನ ವಿರುದ್ಧ ಕ್ರಮಕ್ಕೆ ಆಗ್ರಹ 

Bharath Vaibhav
ತಿಂಡಿಗೆ ಬಿದ್ದಾಳ ಹಾದರಗಿತ್ತಿ  : ಅಶ್ಲೀಲ ಹಾಡುಗಾರನ ವಿರುದ್ಧ ಕ್ರಮಕ್ಕೆ ಆಗ್ರಹ 
WhatsApp Group Join Now
Telegram Group Join Now

ಬೆಳಗಾವಿ : ಕಾನೂನುಬಾಹಿರ ಅಶ್ಲೀಲ, ಅಸಭ್ಯ ಗೀತೆಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಡಿ ಜಾನಪದ ಗೀತೆಗಳೆಂದು ಬಿಂಬಿಸಿ ಯುವಜನತೆಯನ್ನು ದಾರಿ ತಪ್ಪಿಸುತ್ತಿರುವ, ಸಾಮಾಜಿಕ ಸ್ವಾಸ್ಥ್ಯ ಅಶಾಂತಿ ಮಾಡಿ ಉತ್ತರ ಕರ್ನಾಟಕ ಸಂಸ್ಕೃತಿ ಹಾಳು ಮಾಡುತ್ತಿರುವ ಎಲ್ಲ ದುಷ್ಕರ್ಮಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶ್ರೀನಿವಾಸಗೌಡ ಪಾಟೀಲ್ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಪೊಲೀಸ್ ಉತ್ತರ ವಲಯ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟ, ವಿಜಾಪುರ, ಬೆಳಗಾವಿ ಇತರೆ ಜಿಲ್ಲೆಗಳಲ್ಲಿಯೂ ಸಾಮಾಜಿಕ ಸ್ವಾಸ್ಥ್ಯ, ಅಶಾಂತಿ ಸೃಷ್ಟಿಸುವ ಕಾನೂನುಬಾಹಿರ ಅಶ್ಲೀಲ ಅಸಭ್ಯ ಹಾಡುಗಳನ್ನು ರಚಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಡುದು ಸಾಮಾನ್ಯವಾಗಿದೆ.

ಜಾತ್ರೆ, ಉತ್ಸವ, ಧಾರ್ಮಿಕ ಸಭೆಗಳಲ್ಲಿ ರಸಮಂಜರಿ ಕಾರ್ಯಕ್ರಮ ನೆಪದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಮಾರಂಭ ಏರ್ಪಡಿಸಿ ಮಹಿಳೆಯರು, ಮಕ್ಕಳು ಘನತೆ ಗೌರವಕ್ಕೆ ಚ್ಯುತಿ ಮತ್ತು ಹಕ್ಕುಗಳನ್ನು ಉಲ್ಲಂಘಸಿ ತೇಜೋವದೆ ಮಾಡಿ ಅಪರಾಧಿಕ ಭಯೋತ್ಪಾದನೆಗೆ ಪ್ರಚೋದನೆಯಾಗಿದ್ದು, ಇದರಿಂದ ಯುವಜನತೆಯೂ ದಾರಿ ತಪ್ಪುತ್ತಾ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದೂರಿದ್ದಾರೆ.

ಜಾನಪದ ಹೆಸರಿನಲ್ಲಿ ಅಶ್ಲೀಲ ಗೀತೆಗಳ ಪ್ರಸಾರ ಫೇಸ್ಟುಕ್, ಯೂಟ್ಯೂಬಗಳಲ್ಲಿ ಇರತಕ್ಕಂತ ಪುರುಷ, ಮಹಿಳೆಯರು ಎಲ್ಲ ತಪ್ಪಿತಸ್ತರ ವಿರುದ್ಧ ಐ.ಟಿ ಕಾಯ್ದೆ 2000 ದಡಿ ಪ್ರಕರಣ ದಾಖಲಿಸಿ ಆ ಹಾಡುಗಳನ್ನು ಅಳಿಸಿ ಹಾಕಬೇಕು. ಮಕ್ಕಳ ಮೇಲೆ ಪರಿಣಾಮ ಬೀರುವ ಇಂತಹ ಕೃತ್ಯ ನಿಲ್ಲಬೇಕೆಂದು ಮನವಿ ಮಾಡಿದರು.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!