ಲಾರ್ಡ್ ( ಲಂಡನ್) : ಭಾರತ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಇಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದ ಮೊದಲ ದಿನ ಇಂಗ್ಲೆಂಡ್ 4 ವಿಕೆಟ್ ಗೆ 251 ರನ್ ಗಳಿಸಿತ್ತು.
ದಿನದಾಟ ಮುಗಿದಾಗ ಜೂ ರೂಟ್ 99 ರನ್ ಗಳಿಸಿ ಹಾಗೂ ನಾಯಕ ಬೆನ್ ಸ್ಟೋಕ್ಸ್ 39 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ಓಲಿ ಪೋಪ್ 44 ರನ್ ಗಳಿಸಿ ನಿರ್ಗಮಿಸಿದರು. ನಿತೀಶಕುಮಾರ ರೆಡ್ಡಿ 46 ಕ್ಕೆ 2 ವಿಕೆಟ್ ಪಡೆದರು.