Ad imageAd image

ಇದು ಯುದ್ದ ಯುಗವಲ್ಲ… ಜೊತೆಗೆ ಭಯೋತ್ಪಾದನೆ ಮಟ್ಟ ಹಾಕಲು ನಾವು ರೆಡಿ: ಪ್ರಧಾನಿ ಮೋದಿ

Bharath Vaibhav
ಇದು ಯುದ್ದ ಯುಗವಲ್ಲ… ಜೊತೆಗೆ ಭಯೋತ್ಪಾದನೆ ಮಟ್ಟ ಹಾಕಲು ನಾವು ರೆಡಿ: ಪ್ರಧಾನಿ ಮೋದಿ
WhatsApp Group Join Now
Telegram Group Join Now

ನವದೆಹಲಿ: ಈ ಯುಗ ಯುದ್ದದ ಯುಗವಲ್ಲ. ಜೊತೆಯಲ್ಲಿ ಭಯೋತ್ಪಾದನೆಗೆ ಕೂಡ ಅವಕಾಶ ನೀಡಲು ಸಾಧ್ಯವಿಲ್ಲ. ಜಗತ್ತು ಕಳೆದ ಕೆಲವು ದಿನಗಳಿಂದ ಭಾರತದ ಆಕ್ರಮಣಕಾರಿ ನೀತಿ ಹಾಗೂ ಶಾಂತಿ ಎರಡನ್ನೂ ನೋಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭಾರತ- ಪಾಕ್ ಕದನ ವಿರಾಮ ಘೋಷಣೆಯಾದ ಎರಡು ದಿನಗಳ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ‘ಆಪರೇಷನ್ ಸಿಂಧೂರ’ ನಂತರದ ಹಲವು ಮಹತ್ವದ ವಿಷಯಗಳನ್ನು ದೇಶದ ಜನರ ಮುಂದೆ ಇಟ್ಟರು.  ‘ಆಪರೇಷನ್ ಸಿಂಧೂರ’ ಒಂದು ಮೈಲಿಗಲ್ಲು ಈ ಕಾರ್ಯಾಚರಣೆ ಭಾರತದ ಮಹಿಳೆಯರಿಗೆ ಸಮರ್ಪಿತ. ಜಗತ್ತು ಯುದ್ಧ ಸಂದರ್ಭದಲ್ಲಿ ‘ಮೆಡ್ ಇನ್ ಇಂಡಿಯಾ’ ಯುದ್ಧಾಸ್ತ್ರಗಳನ್ನು ನೋಡಿದೆ.  ಭಾರತ ಯೋಧರಿಂದ ಕೈಗೊಂಡ ದಾಳಿಯಲ್ಲಿ ನೂರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಿದ್ದೇವೆ. ಭಾರತ ಪಾಕಿಸ್ತಾನದೊಂದಿಗೆ ಮಾತನಾಡುವುದಾದರೆ ಅದು ಉಗ್ರರಿಗೆ ಬೆಂಬಲ ನೀಡುವುದನ್ನು ಮೊದಲು ನಿಲ್ಲಿಸಲಿ, ಉಗ್ರವಾದವನ್ನು ಮೊದಲು ತ್ಯಜಿಸಲಿ ಎಂದು ಮೊಂಡ ಪಾಕಿಸ್ತಾನಕ್ಕೆ ತಾಕೀತು ಮಾಡಿದರು.

ಭಯೋತ್ಪಾದನೆ ಹಾಗೂ ಸಂಧಾನ ಮಾತುಕತೆಗಳು ಎರಡೂ ಏಕ ಕಾಲಕ್ಕೆ ನಡೆಯಲು ಸಾಧ್ಯವೇ ಇಲ್ಲ. ಪಾಕಿಸ್ತಾನ ಉಳಿಯುವುದಾದರೆ ಅದು ಭಯೋತ್ಪಾದನೆಗೆ ನೆರವು ನೀಡುವುದನ್ನು ನಿಲ್ಲಿಸಲೇ ಬೇಕು.  ಭಗವಾನ್  ಬುದ್ದ ನಮಗೆ ಶಾಂತಿ  ಸಂದೇಶ ನೀಡಿದ್ದಾರೆ. ಅವರ ಸಂದೇಶವನ್ನು ಪಾಲಿಸುವ ನಾವು ಶಾಂತಿ ಪಾಲನೆಗೆ ಬದ್ದ ಎಂದು ಹೇಳಿದರು.

ಭಾರತ ಯೋಧರಿಗೆ ಅಭಿನಂದನೆ: ಯುದ್ಧ ಕಾಲದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ ನೀಡಿದ ನಮ್ಮ ಭಾರತ ಯೋಧರು ಅಭಿನಂದನಾರ್ಹರು ಎಂದು ಪ್ರಧಾನಿ ಮೋದಿ ತಿಳಿಸಿದರು. ಯುದ್ಧ ಕಾಲದಲ್ಲಿ ಈಡೀ ಭಾರತ ತೋರಿದ ಒಗ್ಗಟ್ಟು ಪ್ರದರ್ಶನಕ್ಕೆ ನಾನು ಋಣಿ ಎಂದು ಮೋದಿಜಿ ಭಾವನಾತ್ಮಕವಾಗಿ ನುಡಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!