Ad imageAd image

ಇದು ಸಿದ್ದರಾಮಯ್ಯನವರಿಗೆ ಕೊನೆ ಅಧಿವೇಶನ : ಬಿ.ವೈ.ವಿಜಯೇಂದ್ರ ಲೇವಡಿ 

Bharath Vaibhav
ಇದು ಸಿದ್ದರಾಮಯ್ಯನವರಿಗೆ ಕೊನೆ ಅಧಿವೇಶನ : ಬಿ.ವೈ.ವಿಜಯೇಂದ್ರ ಲೇವಡಿ 
BY VIJENDRA
WhatsApp Group Join Now
Telegram Group Join Now

ಬೆಳಗಾವಿ: ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಇದು ಸಿದ್ದರಾಮಯ್ಯನವರಿಗೆ ಕೊನೆ ಅಧಿವೇಶನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪಾಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು.

ಮುಖ್ಯಮಂತ್ರಿಗಳ ಮಾತಿನ ದಾಟಿ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಸದನದಲ್ಲಿ ಚರ್ಚಿಸುವುದಕ್ಕೆ ಔಟ್ ಗೋಯಿಂಗ್ ಮುಖ್ಯಮಂತ್ರಿಗಳಿಂದ ಪರಿಹಾರ ಸಿಗುತ್ತದೆ ಎನ್ನುವ ಆಶಾಭಾವನೆ ಇಲ್ಲ ಎಂದು ಹೇಳಿದರು.

ನೀವು ಸಿಎಂ ಆಗಿ ಎಷ್ಟು ದಿನ ಇರ್ತೀರಾ ಅನ್ನುವುದು ಮುಖ್ಯವಲ್ಲ. ಆ ಸ್ಥಾನದಲ್ಲಿದ್ದು ರಾಜ್ಯಕ್ಕೆ ಏನು ಕೆಲಸ ಮಾಡಿದ್ದೀರಿ? ಎಂಬುದು ಮುಖ್ಯ. ಸಿದ್ದರಾಮಯ್ಯನವರ ಕೊನೆಯ ಅಧಿವೇಶನದಲ್ಲಾದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.

ಕಳೆದ ಎರಡೂವರೆ ವರ್ಷಗಳಿಂದ ಏನೂ ಮಾಡದೇ ಇರೋರು ಇನ್ನೆರಡು ವಾರದಲ್ಲಿ ಏನು ಮಾಡ್ತಾರೆ? ಎಂದು ವಾಗ್ದಾಳಿ ನಡೆಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!