ಲಾಡ್ಸ (ಲಂಡನ್): ಐಸಿಸಿ ವಿಶ್ವ ಕ್ರಿಕೆಟ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ನಡುವೆ ಇಲ್ಲಿ ನಡೆಯುತ್ತಿದ್ದು ಈ ಪಂದ್ಯದಲ್ಲಿ ವಿಶಿಷ್ಠ ದಾಖಲೆ ಸೃಷ್ಠಿಯಾಗಿದೆ.
————————————-ಸಂಗ್ರಹ ಚಿತ್ರ ಕಲ್ಪನೆಗೆ ಮಾತ್ರ
ಟೆಸ್ಟ್ ಮಾದರಿಯ ಪಂದ್ಯವನ್ನು ಮೊದಲು ಇಂಗ್ಲೆಂಡ್ನಲ್ಲಿ ಆಡಿದಾಗಿನಿಂದ (1880, ಇಂಗ್ಲೆಂಡ್ vs ಆಸ್ಟ್ರೇಲಿಯಾ, ದಿ ಓವಲ್). ಇಂಗ್ಲೆಂಡ್ನಲ್ಲಿ ನಡೆದ 561 ಟೆಸ್ಟ್ಗಳಲ್ಲಿ ಎರಡೂ ಕಡೆಯ ಅಗ್ರ ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದಾರೆ. ಎರಡೂ ತಂಡಗಳ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 0 ರನ್ ಗಳಿಸಿದ ಮೊದಲ ನಿದರ್ಶನ ಇದಾಗಿದೆ.
ಬುಧವಾರ, ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ ಮತ್ತು ದಕ್ಷಿಣ ಆಫ್ರಿಕಾದ ಐಡೆನ್ ಮಾರ್ಕ್ರಾಮ್ ಇಬ್ಬರು ಶೂನ್ಯಕ್ಕೆ ಔಟಾದರು. ಆ ಮೂಲಕ ಉಭಯ ತಂಡಗಳು ಈ ವಿಲಕ್ಷಣ ದಾಖಲೆಗೆ ಪಾತ್ರವಾಗಿದೆ. ಅಂತೆಯೇ ಒಟ್ಟಾರೆಯಾಗಿ, ಟೆಸ್ಟ್ ಇತಿಹಾಸದಲ್ಲಿ ಇಂತಹ ಘಟನೆ ನಡೆದಿರುವುದು 10ನೇ ಬಾರಿಯಾಗಿದೆ.