Ad imageAd image

ಯಲಬುರ್ಗಾ ತಾಲೂಕಿನ ಸಂಗನಾಳ್ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂವರೆಗೂ ನಡೆತಾಯಿರುವುದು ಇದುವೇ ಸಾಕ್ಷಿ

Bharath Vaibhav
ಯಲಬುರ್ಗಾ ತಾಲೂಕಿನ ಸಂಗನಾಳ್ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂವರೆಗೂ ನಡೆತಾಯಿರುವುದು ಇದುವೇ ಸಾಕ್ಷಿ
WhatsApp Group Join Now
Telegram Group Join Now

ಹುಕ್ಕೇರಿ:-ಕರ್ನಾಟಕ ಸಮತಾ ಸೈನಿಕ ದಳ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಪ್ರತಿಭಟನೆ ಮುಖಾಂತರ ತಶೀಲ್ದಾರರಿಗೆ ಮನವಿ ಪತ್ರ ನೀಡಲಾಯಿತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳ್ ಗ್ರಾಮದ ಯಮನೂರಪ್ಪಾ ಈರಪ್ಪ ಬಂಡಿಹಾಳ್ (23) ಈತನು ಕಟಿಂಗ್ ಮಾಡಿಸಿ ಕೊಳ್ಳಲು ಕರಮುಡಿ ಗ್ರಾಮದ ಮುದಕಪ್ಪಾ ಅಂದಪ್ಪಾ ಹಡಪದ ಈತನ ಹತ್ತಿರ ಹೋಗಿರುತ್ತಾನೆ.

ಸದರಿ ಮುದಕಪ್ಪಾ ಅಂದಪ್ಪಾ ಹಡಪದ ಈತನು ಯಮನೂರಪ್ಪಾ ಈರಪ್ಪ ಬಂಡಿಹಾಳ್ ನೀನು ಪರಿಶಿಷ್ಟ ಜಾತಿಯ ( ಎಸ್. ಸಿ. ) ವ್ಯಕ್ತಿ ಇದ್ದು ನಾನು ನಿಮ್ಮ ಜಾತಿಯವರಿಗೆ ಕಟಿಂಗ್ ಮಾಡುವುದಿಲ್ಲ ಎಂದು ಅಮಾನವೀಯವಾಗಿ ಹೇಳಿದ್ದರಿಂದ ಮಾತಿಗೆ ಮಾತು ಬೆಳೆದು ಮುದಕಪ್ಪಾ ಅಂದಪ್ಪಾ ಹಡಪದ ಈತನು ಪರಿಶಿಷ್ಟ ಜಾತಿಯ ಯಮನೂರಪ್ಪಾ ಈರಪ್ಪ ಬಂಡಿಹಾಳ್ ಈತನನು ತನ್ನ ಕೈಯಲ್ಲಿ ಇದ್ದ ಕತ್ರಿಯಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿರುತ್ತಾನೆ.

ನಂತರ ಮುದಕಪ್ಪಾ ಅಂದಪ್ಪಾ ಹಡದಪ್ಪ ಈತನು ಕೊಲೆ ಮಾಡಿ ಯಮನೂರಪ್ಪ ಬಂಡಿಹಾಳ್ ಈತನ ಸಹೋದರನಿಗೆ ಫೋನ್ ಮಾಡಿ ನಿಮ್ಮ ಸಹೋದರ ನಮ್ಮ ಅಂಗಡಿಯ ಮುಂದೆ ಮಲಗಿದ್ದಾನೆ ಆತನನ್ನು ಕರೆದುಕೊಂಡು ಹೋಗಿ ಎಂದು ಹೇಳಿರುತ್ತಾನೆ.

ಆಗ ಯಮನೂರಪ್ಪ ಬಂಡಿಹಾಳ್ ಈತನ ಸಹೋದರ ಸ್ಥಳಕ್ಕೆ ಬಂದು ಯಮನೂರಪ್ಪ ಬಂಡಿಹಾಳ್ ಈತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸದರಿ ಆಸ್ಪತ್ರೆಯ ವೈದ್ಯರು ಯಮನೂರಪ್ಪ ಬಂಡಿಹಾಳ್ ಈತನು ಮೈತನಾಗಿರುತ್ತಾನೆ ಎಂದು ತಿಳಿಸಿರುತ್ತಾರೆ.

ಸದರಿ ಘಟನೆಯ ಕುರಿತು ಮುದಕಪ್ಪಾ ಅಂದಪ್ಪಾ ಹಡದಪ್ಪ ಈತನ ಮೇಲೆ ಎಫ್. ಐ. ಆರ್. ದಾಖಲಾಗಿದ್ದು ಇರುತ್ತದೆ ಕಾರಣ ಮಾನ್ಯರು ಮೈತ ಯಮನೂರಪ್ಪ ಈರಪ್ಪ ಬಂಡಿಹಾಳ್ ಈತನ ಕುಟುಂಬಕ್ಕೆ ಆದಷ್ಟು ಬೇಗನೆ ಸರಕಾರದಿಂದ ಬರತಕ್ಕ ಸೌಲಭ್ಯಗಳನ್ನು ಕೂಡಲೆ ಪೂರೈಸಬೇಕು ಮತ್ತು ತಪ್ಪಿತಸ್ಥನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಈ ಸಂದರ್ಭದಲ್ಲಿ-ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಅಧ್ಯಕ್ಷರಾದ ಶಿವಾಜಿ ಎನ್ ಬಾಲೇಶಗೋಳ, ಕಾನೂನು ಸಲಹೆಗಾರ ರಾಜೇಂದ್ರ ಮೊಶಿ, ದಲಿತ ಮುಖಂಡರಾದ ಸುನೀಲ್ ಭೈರಣ್ಣವರ, ತಾಲೂಕ ಅಧ್ಯಕ್ಷರಾದ ಷಣ್ಮುಖ ದೇವರಮನೆ, ಗಣಪತಿ ಜಾಡರ್, ಹಂಜ್ಯಾನಟ್ಟಿ ಗ್ರಾಮದ ಕರ್ನಾಟಕ ಸಮತಾ ಸೈನಿಕ ದಳ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!