Ad imageAd image

ಮಹಿಳೆಯರು ಮದುವೆ ನಂತರ ದಪ್ಪಾಗುವರೇ: ಹೀಗೊಂದು ಚಿಂತನೆ

Bharath Vaibhav
ಮಹಿಳೆಯರು ಮದುವೆ ನಂತರ ದಪ್ಪಾಗುವರೇ: ಹೀಗೊಂದು ಚಿಂತನೆ
WhatsApp Group Join Now
Telegram Group Join Now

ಹಿಳೆಯರು ಹೆಚ್ಚಾಗಿ ತೂಕ ಹೆಚ್ಚಳದಂತಹ ಸಮಸ್ಯೆಗೆ ಒಳಗಾಗುವುದು ನೋಡಬಹುದು. ಹಾಗೆ ಮಹಿಳೆಯರಲ್ಲಿ ಬಹುಬೇಗ ತೂಕ ಹೆಚ್ಚಳ ಆಗುವುದು ಬಹುದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರ ಆಹಾರ ಹಾಗೂ ಜೀವನ ಶೈಲಿ ಒಂದು ಕಡೆಯಲ್ಲಿ ಇದಕ್ಕೆ ಕಾರಣವಾಗುತ್ತಿದೆ. ಅತೀ ಕಡಿಮೆ ಸಮಯದಲ್ಲಿ ಅವರು ಅತೀ ಹೆಚ್ಚು ತೂಕ ಪಡೆಯುವುದು ಹೊಸ ರೀತಿಯ ಸಮಸ್ಯೆಗಳ ತರುತ್ತಿದೆ.

ಅದರಲ್ಲೂ ಮಹಿಳೆಯರು ಮದುವೆಯಾದ ಬಳಿಕ ಏಕಾಏಕಿ ತೂಕ ಹೆಚ್ಚಳ ಆಗುವುದನ್ನು ನಾವು ನೋಡಬಹುದು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಮಹಿಳೆಯರು ತೂಕ ಹೆಚ್ಚಳವಾಗುವುದು ಈಗ ಸಾಮಾನ್ಯವಾಗಿ ಎಲ್ಲರಲ್ಲೂ ನೋಡಬಹುದು. ಇದು ಎಲ್ಲರಿಗೂ ಕಾಡುವ ಸಮಸ್ಯೆ. ಹಾಗೆ ಯುವತಿಯರಲ್ಲು ಇದು ಹೆಚ್ಚಾಗುತ್ತಿದೆ. ಈ ಸಮಸ್ಯೆ ಅವರ ತಾಯ್ತನ ಹಾಗೆ ದೈನಂದಿನ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ.

ಇದಕ್ಕೆ ಹತ್ತು ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಅದರಲ್ಲೂ ಆಹಾರ ಶೈಲಿ ಹಾಗೂ ಜೀವನದಲ್ಲಾಗುವ ಹಲವು ಕಾರಣಗಳ ಪಟ್ಟಿ ಮಾಡಬಹುದು. ಹಾಗಾದ್ರೆ ನಾವಿಂದು ಮದುವೆಯಾದ ಮಹಿಳೆಯರಲ್ಲಿ ಏಕಾಏಕಿ ತೂಕ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳನ್ನು ತಿಳಿದುಕೊಳ್ಳೋಣ. ಇದು ಮದುವೆ ಆಗುವುದು ಕಾರಣವಲ್ಲ ಹಲವರು ಮದುವೆಯಾದ ಬಳಿಕ ತಮ್ಮ ತೂಕ ಹೆಚ್ಚಳವಾಗಿದೆ ಎಂಬ ತಪ್ಪು ಕಲ್ಪನೆಗೆ ಒಳಗಾಗುತ್ತಾರೆ, ಆದ್ರೆ ಮದುವೆಗೂ ಈ ತೂಕ ಹೆಚ್ಚಳಕ್ಕೂ ಒಂದಕ್ಕೊಂದು ಸಂಪರ್ಕವೇ ಇಲ್ಲ. ವಯಸ್ಸಿನ ಕಾರಣದಿಂದಾಗಿ ತೂಕ ಹೆಚ್ಚಳವಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು 30 ವರ್ಷ ದಾಟಿದ ಬಳಿಕ ಆವರ ದೇಹದಲ್ಲಾಗುವ ಹಲವು ಬದಲಾವಣೆಗಳು ಹಾಗೂ ಮದುವೆಯ ಬಳಿಕ ಅವರ ಜೀವನ ಶೈಲಿಯಲ್ಲಿನ ಬದಲಾವಣೆ ಇದಕ್ಕೆ ಕಾರಣವಾಗುತ್ತದೆ. ನೀವು ಮದುವೆ ಆಗದಿದ್ದರೂ ಈ ವಯಸ್ಸು ದಾಟಿದ ಬಳಿಕ ತೂಕ ಹೆಚ್ಚಳ ಆಗುವುದು ನೋಡಬಹುದು.

ಹಾರ್ಮೋನ್ ಬದಲಾವಣೆ ಮಹಿಳೆಯರು 30 ವರ್ಷ ದಾಟಿದ ಬಳಿಕ ಅವರಲ್ಲಿ ಹಲವು ರೀತಿಯ ಹಾರ್ನೋನ್ ಬದಲಾವಣೆಗಳ ನೋಡಬಹುದು. ಅದರಲ್ಲೂ ಗರ್ಭಾವಸ್ಥೆಯಲ್ಲಿ ಅವರಲ್ಲಿ ಹಲವು ರೀತಿಯ ಹಾರ್ಮೋನ್ ಬದಲಾವಣೆಯ ಕಾರಣದಿಂದಾಗಿ ಅವರ ತೂಕದಲ್ಲಿ ಏಕಾಏಕಿ ಏರಿಕೆಯಾಗುವುದು ನೋಡಬಹುದು. ಇದು ಸಾಮಾನ್ಯವಾಗಿ 30 ರಿಂದ 35 ವರ್ಷ ದಾಟಿದ ಬಹುತೇಕ ಮಹಿಳೆಯರಲ್ಲಿ ಉಂಟಾಗುವುದರಿಂದ ಅವರ ತೂಕ ಹೆಚ್ಚಳದ ನೋಡಬಹುದು.

ಈ ತೂಕ ಹೆಚ್ಚಳದ ಕುರಿತು ವೈದ್ಯೆ ಡಾ. ಅಕ್ಷತಾ ಆವರು ಹೇಳುವುದು ಹೀಗೆ, ‘ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುವುದು ಸಾಮಾನ್ಯ. ಇದಕ್ಕೆ ಹಲವು ಕಾರಣಗಳಿರಬಹುದು. ಕೆಲವರಲ್ಲಿ ಜೀವನ ಶೈಲಿ ಕಾರಣವಾದರೆ ಮತ್ತೆ ಕೆಲವರಲ್ಲಿ ಹಾರ್ಮೋನ್, ಅನುವಂಶೀಯತೆ ಕೂಡ ಕಾರಣವಾಗುತ್ತದೆ. ಮದುವೆಯ ನಂತರ ತೂಕ ಹೆಚ್ಚಾದರೆ ಉತ್ತಮ ಆರೋಗ್ಯದ ಸಂಕೇತವು ಹೌದು ಆದರೆ ಅದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು. ನಿಯಮಿತ ವ್ಯಾಯಾಮ, ದೈಹಿಕ ಚಟುವಟಿಕೆಗಳಿದ್ದಾಗ ಈ ರೀತಿ ತೂಕ ಹೆಚ್ಚಳ ಆಗುವುದಿಲ್ಲ. ಆರೋಗ್ಯವಂತ ಮಹಿಳೆ ಎಂದು ಕರೆಸಿಕೊಳ್ಳಬೇಕಾದರೆ ಅವರ ತೂಕ ಕೂಡ ಹೆಚ್ಚಾಗಿರಬೇಕು ಎಂದೇನಿಲ್ಲ. ವಯಸ್ಸಿಗೆ ತಕ್ಕ ಹಾಗೆ ಅವರ ತೂಕ ಇದ್ದರೆ ಸಾಕು’ ಎಂದಿದ್ದಾರೆ.

WhatsApp Group Join Now
Telegram Group Join Now
Share This Article
error: Content is protected !!