ತೀರ ಬಡವರು ಯಾರು ಎಂಬುದನ್ನು ಪತ್ತೆ ಮಾಡುವುದು ಕಷ್ಟಕರ. ಆದ್ರೆ ಇಲ್ಲೊಬ್ಬ ವ್ಯಕ್ತಿಯನ್ನು ಜನರೇ ಆತ ಭಾರತದ ಅತ್ಯಂತ ಬಡ ವ್ಯಕ್ತಿ ಎಂದು ಕರೆದಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಇಲ್ಲೊಬ್ಬ ವ್ಯಕ್ತಿಯ ಆದಾಯ ವರ್ಷಕ್ಕೆ ಕೇವಲ 3 ರೂಪಾಯಿ. ಹೌದು ನಿಮಗೆ ಅಚ್ಚರಿ ಎನಿಸುತ್ತಿರಬಹುದು, ದಿನಕ್ಕೊಬ್ಬನಿಗೆ 100 ರೂಪಾಯಿ ಇದ್ದರೂ ಮೂರು ಹೊತ್ತಿನ ಊಟ ಮಾಡುವುದು ಕಷ್ಟವಾಗುತ್ತೆ.
ಆದ್ರೆ ಈತ ಕೇವಲ 3 ರೂಪಾಯಿಯಲ್ಲಿ ಇಡೀ ವರ್ಷ ಕಳೆದಿರೋದು ಹೇಗೆ ಎಂಬ ಅಚ್ಚರಿ ಮೂಡುವುದು ಸಹಜ. ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರೈತನೊಬ್ಬನ ವಾರ್ಷಿಕ ಆದಾಯ ಕೇವಲ 3 ರೂಪಾಯಿ. ಆದ್ರೆ ಇದು ಸರ್ಕಾರಿ ದಾಖಲಾತಿಗಳಲ್ಲಿ ಮಾತ್ರ. ಹೌದು ರೈನೊಬ್ಬನ ಈ ರೀತಿ ವಾರ್ಷಿಕ ಆದಾಯದ ದಾಖಲಾತಿಯು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಹಶೀಲ್ದಾರ್ ಅವರ ಅಧಿಕೃತ ಸೀಲ್ ಮತ್ತು ಸಹಿ ಕೂಡ ಇರುವ ಈ ದಾಖಲಾತಿಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆತ ಭಾರತದ ಅತ್ಯಂತ ಬಡ ವ್ಯಕ್ತಿ ಎಂದು ಜನರೇ ಗುರುತಿಸಿದ್ದಾರೆ.




