Ad imageAd image

ಸುಧಾರಾಣಿ ಉಟ್ಟಿರುವ ಈ ಸೀರೆ ಬರೋಬ್ಬರಿ 60 ವರ್ಷ ಹಿಂದಿನದು

Bharath Vaibhav
ಸುಧಾರಾಣಿ ಉಟ್ಟಿರುವ ಈ ಸೀರೆ ಬರೋಬ್ಬರಿ 60 ವರ್ಷ ಹಿಂದಿನದು
WhatsApp Group Join Now
Telegram Group Join Now

ಚ್ಚಗನ್ನಡದ ಸ್ವಚ್ಛ ಮನಸ್ಸಿನ ಅರಗಿಣಿ ನಟಿ ಸುಧಾರಾಣಿ (Sudharani) ಅವರು ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ನಟಿ ಸುಧಾರಾಣಿ ಅವರು ನಾಡಿನ ಸಮಸ್ತ ಜನರಿಗೆ ಯುಗಾದಿ ಶುಭಾಶಯ ತಿಳಿಸಿದ್ದಾರೆ. ಜೊತೆಗೆ, ಮತ್ತೊಂದು ಮುಖ್ಯವಾದ, ಅಚ್ಚರಿ ಹುಟ್ಟಿಸುವ ಸಂಗತಿಯೊಂದನ್ನು ಅವರು ಹಂಚಿಕೊಂಡಿದ್ದಾರೆ. ಅದೇನು ಅನ್ನೋ ಕುತೂಹಲ ನಿಮಗಿದ್ದರೆ ಈ ಸ್ಟೋರಿಯನ್ನು ಖಂಡಿತ ಫುಲ್ ನೋಡಿ..

ಹೌದು ಸುಧಾರಾಣಿಯವರು ಯುಗಾದಿ ಶುಭಾಶಯ ಕೋರಿದ್ದಾರೆ. ಜೊತೆಗೆ, ಅವರು ಸಿಂಪಲ್ ಸೀರೆಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯಂತೆ ಕಂಗೊಳಿಸುತ್ತಿದ್ದರು. ಮಹಿಳೆಯರೇ ಯಾರೇ ಆ ಸೀರೆಯನ್ನು ನೋಡಿದರೆ ಅವರ ಕಣ್ಣು ಕುಕ್ಕೋದು ಖಂಡಿತ. ಅಷ್ಟು ಸರಳ ಹಾಗೂ ಸುಂದರವಾಗಿದೆ ಆ ಸಿಮೆಂಟ್ ಕಲ್ ಸ್ಯಾರಿ.. ಹಾಗಿದ್ದರೆ ಸುಧಾರಾಣಿಯವರಿಗೆ ಅದೆಲ್ಲಿಂದ ಬಂತು? ಕೊಟ್ಟಿದ್ದು ಯಾರು? ಉಟ್ಟಿದ್ದು ಸುಧಾರಾಣಿ ಹೌದು, ಆದ್ರೆ ಕೊಟ್ಟಿದ್ದು ಯಾರು ಅಂತ ಗೊತ್ತಾದ್ರೆ ಖಂಡಿತ ಶಾಕ್ ಆಗ್ತೀರಾ. ಜೊತೆಗೆ, ಆ ಸಾರಿಗೆ ಅದೆಷ್ಟು ವಯಸ್ಸಾಯ್ತು ಗೊತ್ತಾ?

ಹೌದು, ನಟಿ ಸುಧಾರಾಣಿಯವರು ಯುಗಾದಿ ಹಬ್ಬಕ್ಕೆ ಸಮಸ್ತ ಜನತೆಗೆ ವಿಶ್ ಮಾಡಲು  ಉಟ್ಟಿದ್ದ ಸೀರೆ ಬರೋಬ್ಬರಿ 60 ವರ್ಷ ಹಿಂದಿನದು. ಅಂದರೆ, ಸುಧಾರಾಣಿಯವರ ಅಮ್ಮ ಕಳೆದ ವಿಶ್ವಬಸು ಸಂವತ್ಸರದಲ್ಲಿ ತೆಗೆದುಕೊಂಡಿದ್ದ ಆ ಸೀರೆಯನ್ನು ಅವರು ಹಬ್ಬಹರಿದಿನಗಳಿಗೆ ಉಟ್ಟುಕೊಳ್ಳುತ್ತಿದ್ದರು. ಅದೀಗ ಸುಧಾರಾಣಿಯವರ ಪಾಲಾಗಿದೆಯಾ? ಇರಬಹುದು ಅಥವಾ ಇಲ್ಲದಿರಬಹುದು. ಆದರೆ, ಆ ಸೀರೆಯನ್ನು ಸುದಾರಾಣಿಯವರು ಈ ವಿಶ್ವಬಸು ಸಂವತ್ಸರದ ಶುರುವಿನ ದಿನ ಅಂದ್ರೆ ಯುಗಾದಿಗೆ ಉಟ್ಟು ಖುಷಿಯಾಗಿ ವಿಶ್ ಮಾಡಿದ್ದಾರೆ.

ಮಹಿಳೆಯರೇ ಹಾಗೆ, ಅವರಿಗೆ ಹಬ್ಬಹರಿದಿನಗಳು ಬಂದರೆ ಸಾಕು ಎಂಬುದೇ ಸದಾ ಮನದಲ್ಲಿ ಧ್ಯಾನ.. ಅಮ್ಮನ ಆಭರಣ, ಸೀರೆ ಅದೂ ಇದೂ ಅಂತ ಹಳೆಯದನ್ನು ನೆನಪಿಸಿಕೊಂಡು ಖುಷಿ ಪಡುತ್ತಾರೆ. ಅದೇ ನೆನಪಲ್ಲಿ ಸುಖ ಪಡುತ್ತಾರೆ. ಸೀರೆಯಲ್ಲೂ ಅಮ್ಮನ ಸೀರೆ ಅವರಿಗೆ ತುಂಬಾ ವಿಶೇಷ. ಹೊಸ ವರ್ಷದ ಹಬ್ಬದಲ್ಲಿ, ಅಂದರೆ ಯುಗಾದಿಗೆ ಅಂಥ ಸೀರೆ ಸಿಕ್ಕರಂತೂ ಮುಗಿದೇ ಹೋಯ್ತು ಬಿಡಿ, ಅವರ ಖುಷಿಗೆ ಆಕಾಶವೇ ಅಂತಿಮ. ಈಗ ನಟಿ ಸುಧಾರಾಣಿಯವರಿಗೆ ಆಗಿರೋದು ಅದೇ, ಅಮ್ಮನ ಸೀರೆಯ ನಂಟು, ಹೇಳಲಾಗದ ಖುಷುಯ ಸೆಂಟು.

WhatsApp Group Join Now
Telegram Group Join Now
Share This Article
error: Content is protected !!