ಅಥಣಿ :-ತಾಲೂಕಿನ ದೇಸಾಯರಟ್ಟಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಪಾಯಲಿಂಗೇಶ್ವರ ಜಾತ್ರಾ ಮಹೋತ್ಸವವೂ ಸೋಮವಾರದಂದು ಜಾತ್ರೆಯು ವಿಶೇಷ ಪೂಜೆ ಹಾಗೂ ವಿಶೇಷ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಿತ್ತು.
ಸೋಮವಾರದಂದು ಶ್ರೀ ಪಾಯಲಿಂಗೇಶ್ವರ ದೇವರ ವಿಶೇಷ ಅಭಿಷೇಕ ಹಾಗೂ ಗಂಗೆ ಸ್ಥಾನದೊಂದಿಗೆ ಬಸವೇಶ್ವರ ಸರ್ಕಲ ದಿಂದ ದೇವರ ಪಲ್ಲಕ್ಕಿ ಉತ್ಸವ ವಿವಿಧ ವಾದ್ಯ ಮೇಳದೊಂದಿಗೆ ಹಾಗೂ ಜೋಡಿ ಎತ್ತು ಗಾಡಿ ಹಾಗೂ ಕೋಲು ಕುಣಿದಾಟದೊಂದಿಗೆ ವಿವಿಧ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತ್ತು
ಈ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಏಳು ದಿನಗಳ ಕಾಲ ಮಹಾಪ್ರಸಾದ ವ್ಯವಸ್ಥೆ ಕೂಡ ಮಾಡಲಾಗಿತ್ತು
ನಂತರ ಸಿದ್ರಾಮ ಕಳಸಣ್ಣವರ ಮಾತನಾಡಿದರು
ಈ ಸಂದರ್ಭದಲ್ಲಿ ಜಾತ್ರಾ ಕಮಿಟಿ ಯುವರಾದ ಏಕನಾಥ್ ಚವ್ಹಾಣ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರಾದ ವಿಜಯ ನೀಕಂ, ಮುತ್ತಪ್ಪ ಕಳಸಣ್ಣವರ, ಅಪ್ಪಾಸಾಬ ಚವ್ಹಾಣ, , ಶಿವಾಜಿ ನಿಕ್ಕಂ ಸಮಸ್ತ ದೇಸಾಯರಟ್ಟಿ ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ಗುರು ಹಿರಿಯರು ಉಪಸದಿದ್ದರು
ವರದಿ:- ಸುಕುಮಾರ್ ಮಾದರ