Ad imageAd image

ಪಂಡಿತರ ಚೀಟಿ ಇರುವವರು ಎಲ್ಲಾ ಸದಸ್ಯರು ಇ ಕೆವೈಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಪ್ ಡೇಟಾ ಮಾಡಿಕೊಳ್ಳುವುದು

Bharath Vaibhav
ಪಂಡಿತರ ಚೀಟಿ ಇರುವವರು ಎಲ್ಲಾ ಸದಸ್ಯರು ಇ ಕೆವೈಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಅಪ್ ಡೇಟಾ ಮಾಡಿಕೊಳ್ಳುವುದು
WhatsApp Group Join Now
Telegram Group Join Now

ಪಾವಗಡ  : ಪಾವಗಡ ತಾಲ್ಲೂಕ್ ಆಹಾರ ನಾಗರಿಕ ಸರಬರಾಜು ಮತ್ತು ಗೃಹಕರ ವ್ಯವಹಾರಗಳ ಇಲಾಖೆ ತಹಸಿಲ್ದಾರ್ ಹಾಗೂ ತಾಲೂಕು ದಂಡಾ ಅಧಿಕಾರಿಗಳು ವತಿಯಿಂದ ಪ್ರಕಟಣೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಪಂಡಿತರ ಚೀಟಿ ಹೊಂದಿರುವ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ಸಂಖ್ಯೆಯನ್ನು ಇ ಕೆ ವೈಸಿ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಅಪ್ ಡೆಟ್ ಮಾಡಬೇಕಾಗಿ

ಸರ್ಕಾರದ ನಿರ್ದೇಶನ ಹಾಗೂ ಇಲಾಖೆ ಅಧಿಕಾರಿಗಳು ಸೂಚನೆಯಂತೆ ತಾಲೂಕಿನಲ್ಲಿ ಪಂಡಿತರ ಚೀಟಿ ಇರುವವರು ನಿಮ್ಮ ಕುಟುಂಬದ ಎಲ್ಲಾ ಸದಸ್ಯರುಗಳ ಎಲ್ಲಾ ಓಟಿಪಿ ಮುಖಾಂತರ ಮೊಬೈಲ್ ಸಂಖ್ಯೆಯನ್ನು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಇ ಕೆ ವೈ ಸಿ ಮೂಲಕ ಅಪ್‌ ಡೇಟಾ ಮಾಡಿಸಬೇಕು.

ಪ್ರತಿ ಸದಸ್ಯರ ಚಾಲ್ತಿಯಲ್ಲಿರುವ ಮೊಬೈಲ್ ಹಾಗೂ ಆಧಾರ Select ಪ್ರತಿಯೊಂದಿಗೆ ನ್ಯಾಯಬೆಲೆ ಅಂಗಡಿ ಅವರಿಗೆ ಮಾಹಿತಿ ನೀಡಬೇಕು.

ನಿಮ್ಮ ಕುಟುಂಬದಲ್ಲಿ ಮೊಬೈಲ್ ಹೊಂದಿರದ ಮಕ್ಕಳು ಅಥವಾ ವಯಸ್ಸಾದವರಿಗೆ ಮೊಬೈಲ್ ಇಲ್ಲದೇ ಇದ್ದಲ್ಲಿ ಕುಟುಂಬದ ಮುಖ್ಯಸ್ಥರ ಮೊಬೈಲ್ ಸಂಖ್ಯೆಯನ್ನು ಈ ಸದಸ್ಯರಿಗೂ ನೀಡಿ ಓಟಿಪಿ ದೃಢೀಕರಿಸಬೇಕು.

ಈ ಮಾಹಿತಿಯನ್ನು ಈ ತಿಂಗಳಲ್ಲಿ ದಿನಾಂಕ,15/02/2025 ಒಳಗಾಗಿ ಅಪ್ ಡೇಟ್ ಮಾಡಿಸದೇ ಇದ್ದಲ್ಲಿ ಮುಂದಿನ ತಿಂಗಳಿಂದ ಪಂಡಿತರ ಆಹಾರ ಧಾನ್ಯಗಳು ಬರದೇ ಇರಬಹುದು.

ಈಗಾಗಲೇ ಪಾವಗಡ ತಾಲೂಕಿನಲ್ಲಿ ಒಟ್ಟು, 2.09.921 ಪಂಡಿತರ ಚೀಟಿಯ ಸದಸ್ಯರುಗಳಿದ್ದು ಈವರೆವಿಗೆ 2.06.224 ಸದಸ್ಯರುಗಳು ಇ ಕೆ ವೈ ಸಿ ಪೂರ್ಣಗೊಂಡಿತ್ತು 3697 ಸದಸ್ಯರುಗಳ ಇ ಕೆ ವೈ ಸಿ ಬಾಕಿ ಇರುತ್ತದೆ ಅದರಿಂದ ಬಾಕಿ ಉಳಿದಿರುವ ಎಲ್ಲರೂ ನಿಗದಿತ ಅವಧಿಯೊಳಗೆ ಇ ಕೆ ವೈ ಸಿ ಕಡ್ಡಾಯವಾಗಿ ಅಪ್ ಡೇಟ್ ಮಾಡಿಸತಕ್ಕದ್ದು.

ಕುಟುಂಬದ ಯಾರಾದರೂ ಸದಸ್ಯರಗಳು ನಿಧನ ಹೊಂದಿದ್ದಲ್ಲಿ ಅಂತಹವರು ಮರಣ ಪ್ರಮಾಣ ಪತ್ರವನ್ನು ತೆಗೆದುಕೊಂಡು ಹೋಗಿ ನ್ಯಾಯಬೆಲೆ ಅಂಗಡಿಯಲ್ಲಿ ಹೆಸರನ್ನು ತೆಗೆಸುವುದು ನ್ಯಾಯ ಬೆಲೆ ಅಂಗಡಿಯಲ್ಲಿ ಅವಕಾಶ.

ಕುಟುಂಬದಲ್ಲಿ ಯಾರಾದರೂ ಸದಸ್ಯರ ಆಧಾರ ಕಾರ್ಡ್ ಸಂಖ್ಯೆ ಪಂಡಿತರ ಚೀಟಿಗೆ ನಮೂದಾಗದೆ ಇದ್ದಲ್ಲಿ ಅಂತಹವರು ತಮ್ಮ ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಹೋಗಿ ನಮೂದು ಮಾಡುವುದು. ಎಂದು ಪಾವಗಡ ತಹಸಿಲ್ದಾರ್ ಪ್ರಕಟಣೆ

ವರದಿ : ಶಿವಾನಂದ ಪಾವಗಡ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!