ಚಾಮರಾಜನಗರ: ರೇಚಂಬಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಡಾ ಬಿ ಆರ್ ಅಂಬೇಡ್ಕರ್134 ನೇ ಜಯಂತಿ ಆಚರಣೆ ಮಾಡಲಾಯತು. ಚಾಮರಾಜನಗರ ತಾಲ್ಲೂಕಿನ ರೇಚಂಬಳ್ಳಿ ಗ್ರಾಮದಲ್ಲಿ ವಿಶ್ವರತ್ನ, ಸಂವಿಧಾನ ಶಿಲ್ಪಿ, ಡಾ.ಬಿ ಆರ್ ಅಂಬೇಡ್ಕರ್ ರವರ134 ನೇ ಜಯಂತಿಯನು ರೇಚಂಬಳ್ಳಿ ಗ್ರಾಮದ ಪ್ರಮುಖ ಬೀದಿಗಲ್ಲಿ ಮೆರವಣಿಗೆ ಮಾಡಲಾಯಿತು.
ಬೀದಿಗಳಿಗೆ ಮೆರವಣಿಗೆಯ ಮೂಲಕ ಸಾಗಿ ಜಯಂತಿಯನ್ನಯ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೆರವಣಿಗೆಯಲ್ಲಿ ಎಲ್ಲಾರೂ ನೀಲಿ ಶಾಲು ಧರಿಸಿ ಅಂಬೇಡ್ಕರ್ ಘೋಷಣೆಯನ್ನು ಕೂಗಿದರು.
ಗ್ರಾಮವು ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿತು. ಯುವಕರು ಕುಣಿದು ಕುಪ್ಪಳಿಸಿ ಸಂಭ್ರಮಿಸದರು.
ಅಂಬೇಡ್ಕರ್ ಸಂಘದ ಅಧ್ಯಕ್ಷರುಗಳು ಯಜಮಾನರುಗಳು ಮಾತನಾಡಿ ನಾವು ಇಂದು ಊರಿನ ಜನರಿಗೆ ಅನ್ನಸಂತರ್ಪಣೆ ಮಾಡುತ್ತಿದ್ದೇವೆ ಈ ಬಾರಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಜಮಾನ್ರು ಗಳಾದ ನಂಜಯ್ಯ, ನಿವೃತ್ತಿ ಅಂಚೆ ಇಲಾಖೆಯ ಅಧಿಕಾರಿ ದೊಡ್ಡಮದಯ್ಯ, ಮಾಜಿ ಅಧ್ಯಕ್ಷರಾದ ಮಾದೇವಸ್ವಾಮಿ, ಕುಮಾರ, ಹಾಗೂ ಯುವ ಮುಖಂಡರುಗಳಾದ ಮಣಿ, ನಂದೇಶ್, ಮಂಜು ಸುನಿ, ದರ್ಶನ್, ಹಾಗೂ ವಿದ್ಯಾರ್ಥಿಗಳಿಗೆ ಯುವಕರು ಮಹಿಳೆಯರು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ