Ad imageAd image

 ಹಣ ತರದಿದ್ದರೆ ಅಕ್ಕನ ಮಗಳ ಮದುವೆ ಆಗು ಬೆದರಿಕೆ : ಕಾನ್ಸ್ಟೇಬಲ್ ವರದಕ್ಷಿಣೆ ಕಿರುಕುಳ

Bharath Vaibhav
 ಹಣ ತರದಿದ್ದರೆ ಅಕ್ಕನ ಮಗಳ ಮದುವೆ ಆಗು ಬೆದರಿಕೆ : ಕಾನ್ಸ್ಟೇಬಲ್ ವರದಕ್ಷಿಣೆ ಕಿರುಕುಳ
WhatsApp Group Join Now
Telegram Group Join Now

ಬೀದರ್: ವರದಕ್ಷಿಣೆ ಕಿರುಕುಳ ಪ್ರಕರಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಪೊಲೀಸ್ ಅಧಿಕಾರಿಗಳು, ಕಾನೂನಿನ ಅರಿವಿರುವವರೇ ಇಂತಹ ಕಿರುಕುಳ ನೀಡುತ್ತಿರುವುದು ನಿಜಕ್ಕೂ ದುರಂತವೇ ಸರಿ. ಪೊಲೀಸ್ ಕಾನ್ಸ್ ಟೇಬಲ್ ಓರ್ವ ಪತ್ನಿಗೆ ವರದಕ್ಷಿಣೆಗಾಗಿ ಪೀಡಿಸುತ್ತಿರುವುದೂ ಅಲ್ಲದೇ ಹಣ ತರದಿದ್ದರೆ ಅಕ್ಕನ ಮಗಳ ಜೊತೆ ಮತ್ತೊಂದು ಮದುವೆಯಾಗುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಬೆಂಗಳೂರಿನ ಮೈಕೋ ಲೇಔಟ್ ಟ್ರಾಫಿಕ್ ಠಾಟ್ನೆ ಪಿಸಿ ಆಗಿರುವ ಮಚ್ಚೇಂದ್ರ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ, ಬೆದರಿಕೆ ಆರೋಪ ಮಾಡಿದ್ದಾರೆ.

ಮಚ್ಚೇಂದ್ರ ಹಾಗೂ ಆತನ ಕುಟುಂಬದವರು ನಿರಂತರವಾಗಿ ವರದಕ್ಷಿಣೆ ಹಣ ತರುವಂತೆ ಸತಾಯಿಸುತ್ತಿದ್ದು, ಹಣ ತರದಿದ್ದರೆ ಅಕ್ಕನ ಮಗಳನ್ನು ಮದುವೆಯಾಗುತ್ತೇನೆ ಎಂದು ಹೆದರಿಸುತ್ತಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಚಿಟಗುಪ್ಪ ಮೂಲದ ಮಚ್ಛೇಂದ್ರ 2022ರಲ್ಲಿ ಬೀದರ್ ಜಿಲ್ಲೆಯ ಔರಾದ್ ನ ಸೀಮಾ ಎಂಬುವವರನ್ನು ವಿವಾಹವಾಗಿದ್ದ. ಬೆಂಗಳೂರಿನ ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಮಚ್ಚೇಂದ್ರ ಕಾನ್ಸ್ ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆರಂಭದಲ್ಲಿ ದಂಪತಿ ಚನ್ನಾಗಿಯೇ ಇದ್ದರು ಕೆಲ ದಿನಗಳ ಬಳಿಕ ಪತ್ನಿಯನ್ನು ತವರಿಗೆ ಕಳಿಸಿದ ಕಾನ್ಸ್ ಟೇಬಲ್ ಮತ್ತೆ ಕರೆತರಲು ಹೋಗಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ವರದಕ್ಷಿಣೆ ನೀಡಬೇಕು.

ಹಣ ತರದಿದ್ದರೆ ಕರೆದುಕೊಂಡು ಬರಲ್ಲ. ಅಕ್ಕನ ಮಗಳನ್ನು ಮದುವೆಯಾಗುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನಂತೆ. ಈ ಬಗ್ಗೆ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈಗ ಔರಾದ್ ನ ಚಿಂತಾಕಿ ಠಾಣೆಯಲ್ಲಿ ಪತ್ನಿ ದೂರು ನೀಡಿದ್ದು, ಆದರೂ ಕಾನ್ಸ್ ಟೇಬಲ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!