———————————————————————–ಮಲ್ಕಪಲ್ಲಿ ಗ್ರಾಮದಲ್ಲಿ ಶಾಲಾ ಕಟ್ಟಡ ಕುಸಿತ
ಸೇಡಂ: 22 ಆಗಸ್ಟ್ 2025 ಸೇಡಂ ತಾಲೂಕಿನ ಮಲ್ಕಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಭೀಕರ ಘಟನೆ ಸಂಭವಿಸಿದೆ. ಹಳೆಯ ಮತ್ತು ಭದ್ರತೆ ಇಲ್ಲದ ಶಾಲಾ ಕಟ್ಟಡದ ಒಂದು ಭಾಗ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದೆ. ಈಘಟನೆಯಲ್ಲಿ ಒಬ್ಬ ವಿದ್ಯಾರ್ಥಿನಿಗೆ ತಲೆಯ ಮೇಲೆ ಮೂರು ಹೊಳೆಯು ಬಿದ್ದು ತೀವ್ರ ಗಾಯವಾಗಿದೆ. ಸಂತೋಷದ ವಿಷಯವೆಂದರೆ, ಈ ದುರ್ಘಟನೆಯಲ್ಲಿ ಮೂವರು ಮಕ್ಕಳು ಸಾವು ತಪ್ಪಿಸಿಕೊಂಡಿದ್ದಾರೆ.

ಈ ಘಟನೆಯು ಸರ್ಕಾರದ ನಿರ್ಲಕ್ಷ್ಯ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಭದ್ರತೆಯ ಕಡೆ ನಿರಂತರ ನಿರ್ಲಕ್ಷ್ಯದ ತೀವ್ರ ಉದಾಹರಣೆಯಾಗಿದ್ದು, ಇಂತಹ ಸನ್ನಿವೇಶಗಳು ಪುನರಾವರ್ತನೆಗೊಳಗಾಗದಂತೆ ತ್ವರಿತ ಕ್ರಮ ಕೈಗೊಳ್ಳಬೇಕು.
ಗಾಯಗೊಂಡ ಮಕ್ಕಳಿಗೆ ತಕ್ಷಣದ ಚಿಕಿತ್ಸೆಯನ್ನು ಸರ್ಕಾರ ಒದಗಿಸಬೇಕು ಮತ್ತು ಶಾಲೆಯ ಎಲ್ಲಾ ಕಟ್ಟಡಗಳ ಭದ್ರತಾ ಪರಿಶೀಲನೆ ತಕ್ಷಣ ನಡೆಯಬೇಕು.
ನ್ಯಾಯವನ್ನು ಪಡೆಯುವವರೆಗೆ ಹೋರಾಟ ಮುಂದುವರೆಯುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾಧ್ಯಕ್ಷರಾದ ಅನಿಲ್ ಕುಮಾರ್ ಪೋಟೆಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




