ಬೆಂಗಳೂರು : ಲೋಕಸಭಾ ಚುನಾವಣೆಗೆ ಇಂದು ರಾಜ್ಯದಲ್ಲಿ ಮೊದಲ ಹಂತದಲ್ಲಿ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ವೋಟ್ ಮಾಡಿ ಬಂದಂತ ಮೂವರು ದಾರುಣವಾಗಿ ಸಾವನ್ನಪ್ಪಿದಂತ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೊಟ್ಟಪ್ಪನಹಳ್ಳಿ ಮೇಗಳ ಗೊಲ್ಲರಹಟ್ಟಿಯಲ್ಲಿ 55 ವರ್ಷದ ಶಾಲಾ ಶಿಕ್ಷಕಿ ಯಶೋಧಮ್ಮ ಎಂಬುವರನ್ನು ಎಆರ್ ಓ ಆಗಿ ನೇಮಕ ಮಾಡಲಾಗಿತ್ತು.
ಚುನಾವಣಾ ಕರ್ತವ್ಯ ನಿರತರಾಗಿದ್ದಂತ ಸಂದರ್ಭದಲ್ಲೇ ಲೋ ಬಿಪಿಯಾಗಿ ಹೃದಯಾಘಾತವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸೋ ಮಾರ್ಗ ಮದ್ಯದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ತುಮಕೂರು ನಗರದ ಎಸ್ ಎಸ್ ಪುರಂನಲ್ಲಿ ಮತ ಚಲಾಯಿಸಿ ಮನೆಗೆ ಬಂದಂತ ರಮೇಶ್ ಎಂಬುವರು ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ರಮೇಶ್ ಅವರು ಬಟ್ಟೆ ಅಂಗಡಿ ವ್ಯಾಪಾರಿಯಾಗಿದ್ದರು.
ಇಂದು ಬೆಳಿಗ್ಗೆ ಎಸ್ ಎಸ್ ಪುರಂ ಮತಗಟ್ಟೆಗೆ ತೆರಳಿ, ಪತ್ನಿಯೊಂದಿಗೆ ಮತಚಲಾಯಿಸಿ ಮನೆಗೆ ಬಂದಿದ್ದರು. ಈ ವೇಳೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಇನ್ನೂ ಮಂಡ್ಯದಲ್ಲಿ ಮತದಾನ ಮಾಡಿ ಬಂದು ವೃದ್ದ ಸಾವನ್ನಪ್ಪಿದ್ದಾರೆ. ಮದ್ದೂರು ತಾಲೂಕಿನ ಚನ್ನೇಗೌಡನ ದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಚನ್ನೇಗೌಡನ ದೊಡ್ಡಿ ಗ್ರಾಮದ ಕುಂದೂರಯ್ಯ(85) ಮೃತ ವೃದ್ದರಾಗಿದ್ದಾರೆ. ಅನಾರೋಗ್ಯದಿಂದ ನರಳುತ್ತಿದ್ದ ಕುಂದೂರಯ್ಯ ಅವರು, ಇಂದು ಕುಟುಂಬಸ್ಥರ ಜೊತೆ ಬಂದು ಮತದಾನ ಮಾಡಿದ್ದರು. ಮತದಾನ ಮಾಡಿ ಹೋದ ಕೆಲ ಸಮಯದಲ್ಲೆ ವೃದ್ದ ಸಾವನ್ನಪ್ಪಿದ್ದಾರೆ.