ರಾಯಚೂರು : ಜೂ.10-ಮುನ್ನೂರು ಕಾಪು ಸಮಾಜದಿಂದ ರೈತರು ಕೃಷಿ ಪಾಲನೆಯಲ್ಲಿ ನಿರತರಾಗುವಂತೆ ಮಾಡುವ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಕುರಿತು ಗ ದ್ವಾಲ್ ಸಂಸ್ಥಾನದಲ್ಲಿ ಜನರು ಮಾತನಾಡುತ್ತಿದ್ದರು ಆದರೆ ನಾನು ಈ ಹಬ್ಬಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ್ದು ಎತ್ತುಗಳ ಸ್ಪರ್ಧೆಯನ್ನು ನೋಡಿ ಬಹಳ ಸಂತೋಷದಾಯಕವಾಗಿದೆ ಮುನ್ನೂರು ಕಾಪು ಸಮಾಜದ ಕಾರ್ಯ ಅತ್ಯಂತ ಶ್ಲಾಘನೆ ಎಂದು ಗದ್ವಾಲ್ ಮಹಾಸಂಸ್ಥಾನದ ಏಳನೇ ತಲೆಮಾರಿ ರಾಜವಂಶಸ್ಥರಾದ ಕೃಷ್ಣ ರಾಮ್ ಭೂಪಲ್ ಅವರು ಹೇಳಿದರು.
ಅವರಿಂದು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ಮೊದಲನೇ ದಿನದ ಭಾರದ ಕಲ್ಲು ಎತ್ತುಗಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.ಮುನ್ನೂರು ಕಾಪು ಸಮಾಜ ಇಷ್ಟೊಂದು ಅದ್ದೂರಿಯಾಗಿ ಮುಂಗಾರು ಬೆಳ್ಳಿ ಹಬ್ಬವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ.
ನಿಜಕ್ಕೂ ಈ ಭಾಗದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ.ಮುನ್ನೂರು ಕಾಪು ಸಮಾಜದ ಮುಂಗಾರು ಬೆಳ್ಳಿ ಹಬ್ಬ ಭಾರಿ ಜನಪ್ರಿಯತೆ ಪಡೆದುಕೊಂಡಿದೆ ಎಂಬುದಕ್ಕೆ ಈ ವೇದಿಕೆ ಉತ್ತಮ ನಿರ್ದೇಶನವಾಗಿದೆ. ಈ ಹಿಂದೆ ಗದ್ವಾಲ್ ಮಹಾಸಂಸ್ಥಾನ ನಮ್ಮ ರಾಜ ವಂಶಸ್ಥರು ರಾಯಚೂರು ಜಿಲ್ಲೆಯನ್ನು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಗದ್ವಾಲ್ ಮಹಾಸಂಸ್ಥಾನ ರಾಜ ವಂಶಸ್ಥರನ್ನು ಕರೆಸಿ ಈಗ ಭಾಗದ ಸಂಸ್ಕೃತಿಯನ್ನು ಪರಂಪರೆಯನ್ನು ಪರಿಚಯ ಮಾಡುತ್ತಿರುವ ಮುನ್ನೂರು ಕಾಪು ಸಮಾಜದ ಕಾರ್ಯವನ್ನು ರಾಜ ವಂಶಸ್ಥರಾದ ನಾನು ಅಭಿನಂದನೆಗಳು ಹಾಗೂ ಸ್ವಾಗತ ಕೋರುತ್ತೇನೆ ಎಂದರು.
ನಂತರ ಗ್ರಾಮಾಂತರ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಈ ಹಿಂದೆ ತಲೆಮಾರಿನಲ್ಲಿ ಗದ್ವಾಲ್ ಮಹಾಸಂಸ್ಥಾನದ ರಾಜವಂಶಸ್ಥರ ಪೂರ್ವಜರು ನಮ್ಮನ್ನು ರಕ್ಷಣೆ ಮಾಡಲು ಆಳ್ವಿಕೆ ಮಾಡಿದ ರಾಜವಂಶಸ್ಥ ಮರಿಮೊಮ್ಮಗ ಕೃಷ್ಣ ರಾಜ್ ಭೂಪಾಲ್ ಅವರು, ಪ್ರಪ್ರಥಮ ಭಾರಿಗೆ ರಾಯಚೂರು ಜಿಲ್ಲೆಗೆ ಮುಂಗಾರು ಬೆಳ್ಳಿ ಹಬ್ಬಕ್ಕೆ ಅವರನ್ನು ಕರೆ ತಂದಿರುವುದು ಹಬ್ಬಕ್ಕೆ ಮತ್ತಿಷ್ಟು ವೈಭವದ ಮೆರುಗು ಬಂದಿದೆ.
ಗದ್ವಾಲ್ ಸಂಸ್ಥಾನದ ರಾಜವಂಶಸ್ಥರು ಈ ಭಾಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಮುಂಗಾರು ಬೆಳ್ಳಿ ಸಂಭ್ರಮದ ಹಬ್ಬಕ್ಕೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಗಜ ಗಾತ್ರದ ಎತ್ತುಗಳನ್ನು ಮಾಲೀಕರು ಮಗುವಂತೆ ಎತ್ತುಗಳನ್ನು ಸಾಕಾಣಿಕೆ ಮಾಡುವ ಮೂಲಕ ರಕ್ಷಣೆ ಮಾಡುತ್ತಿರುವುದು ರೈತರ ಕಾಳಜಿ ಮೆಚ್ಚುವಂತಹದು. ಆಕರ್ಷಕ ಎತ್ತುಗಳಿಗೆ ಎಸಿ ಬೆಡ್ ರೂಮ್ ವ್ಯವಸ್ಥೆ ಮಾಡಿ ಎತ್ತುಗಳನ್ನು ಮಗುವಂತೆ ರಕ್ಷಣೆ ಮಾಡಲಾಗುತ್ತಿದೆ ಎಂದು ಎತ್ತಿನ ಮಾಲೀಕ ಹೇಳಿದರು. ಆದರೆ ಇಂದಿನ ಕಾಲಘಟ್ಟದಲ್ಲಿ ರೈತಾಪಿ ಜನಾಂಗದವರು ಇರುವುದು ನಿಜಕ್ಕೂ ಆಶ್ಚರ್ಯ, ಪಾಪರೆಡ್ಡಿ ಅವರ ನೇತೃತ್ವದಲ್ಲಿ 25 ವರ್ಷಗಳಿಂದ ನಿರಂತರವಾಗಿ ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ವರದಿ : ಗಾರಲ ದಿನ್ನಿ ವೀರನ ಗೌಡ




