ಧಾರವಾಡ : ಸಂಪಿಗೆ ನಗರದ ಬಳಿ ಲಾರಿ ಮತ್ತು ಆಟೋ ಮಧ್ಯೆ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಆಟೋ ಚಾಲಕ ರಮೇಶ್ ಹಂಚಿನಮನಿ (35), ಮರೆವ್ವ ಹಂಚಿನಮನಿ (55) ಪ್ರಣವ್ (06) ಮೃತ ದುರ್ದೈವಿಗಳು. ಮೃತರು ಕೆಲಗೇರಿ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ರೇಣುಕಾ (25) ಮತ್ತು ಪೃಥ್ವಿ (4) ಎಂಬುವರಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರೈಲು ನಿಲ್ದಾಣಕ್ಕೆ ಹೊರಟಿತ್ತು. ದಾರಿ ಮಧ್ಯೆ ಬಿಡಾಡಿ ದನಗಳು ಮಲಗಿದ್ದವು.
ದನಗಳಿಗೆ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಬಳಿಕ ಆಟೋ ಪಲ್ಟಿಯಾಗಿದೆ. ಸ್ಥಳದಲ್ಲೇ ರಮೇಶ್ ಮತ್ತು ಮರೆವ್ವ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪ್ರಣವ್ ಮೃತಪಟ್ಟಿದ್ದಾನೆ. ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.