ಮೊಳಕಾಲ್ಮುರು: ಪಟ್ಟಣದ ಹೊರವಲಯದ ಎದ್ದುಲಬೊಮ್ಮಯ್ಯನಹಟ್ಟಿಯ ಚೆಕ್ ಪೋಸ್ಟ್ ನಲ್ಲಿ ಹಿಟ್ ಅಂಡ್ ರನ್ ಗೆ ಮೂರು ಜನರು ಗಂಭೀರ ವಾಗಿ ಗಾಯಗೊಂಡಿದ್ದಾರೆ.
ಸೋಮವಾರ ಬೆಳಿಗ್ಗೆ:10:40ಕ್ಕೆ ಪಟ್ಟಣದಿಂದ ರಾಯದುರ್ಗ ಕಡೇ ಬೈಕ್ ನಲ್ಲಿ ತೆರಳುತ್ತಿರುವಾಗ ಈ ಘಟನೆ ನಡೆದಿದೆ,ಬೈಕ್ ಗೆ ಕಾರ್ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂರು ಜನರು ಗಂಭೀರವಾಗಿ ಗಾಯಳಾಗಿದ್ದು, ಇವರ ಪೈಕಿ ಓರ್ವನ ಸ್ಥಿತಿ ಚಿಂತಾಜಕವಾಗಿದೆ. ಇನ್ನಿಬ್ಬರಿಗೆ ಕೈ ಕಾಲು ತಲೆಗೆ ಪೆಟ್ಟುಗಳು ಆಗಿವೆ,ಇವರು ಮೂಲತಃ ಕೂಡ್ಲಿಗಿಯ ಅಪ್ಪೆನ ಹಳ್ಳಿ ತಾಂಡದವರಾಗಿದ್ದಾರೆ. ಗಾಯಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಪಘಾತದಲ್ಲಿ ಕಾರ್ ಮತ್ತು ಬೈಕ್ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಕ್ರೈಂ ಪಿಎಸ್ ಐ ಈರೇಶ್ ಭೇಟಿ ಪರಿಶೀಲಿಸಿದ್ದಾರೆ.