ಯಾದಗಿರಿ : ಕಲುಷಿತ ನೀರು ಸೇವನೆಯಿಂದಾಗಿ ಮೂವರು ಸಾವನ್ನಪ್ಪಿದ್ದು, 20 ಮಂದಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣ ಸುರಪುರದ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ದೇವಿಕೆಮ್ಮ ಹೊಟ್ಟಿ (48) , ವೆಂಕಪ್ಪ (60) ಹಾಗೂ ರಾಮಣ್ಣ ಪೂಜಾರಿ (50) ಮೃತ ದರ್ದೈವಿಗಳು.
ಕಳೆದ ವಾರ ಈ ಪ್ರಕರಣ ನಡೆದಿದ್ದು, ಕಲುಷಿತ ನೀರು ಸೇವನೆಯಿಂದ ಜನರು ವಾಂತಿ ಬೇಧಿ ಮುಂತಾದ ಸಮಸ್ಯೆಗಳಿಂದ ಅಸ್ವಸ್ಥರಾಗಿದ್ದರು.
ಆರೋಗ್ಯ ಹದಗೆಟ್ಟವರನ್ನು ಆಸ್ಪ್ರತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಈ ಮೂವರೂ ಮೃತಪಟ್ಟಿದ್ದಾರೆ. ಅಸ್ವಸ್ಥರ ಪೈಕಿ ಆರು ಜನರ ಸ್ಥಿತಿ ಗಂಭೀರವಾಗಿದೆ.ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.
ಕಲುಷಿತ ನೀರು ಸೇವನೆಯಿಂದ ಸಾವನನ್ನಪ್ಪುವವರ ಸಂಖ್ಯೆ ರಾಜ್ಯದಲ್ಲಿ ಕಳೆದೊಂದು ವರ್ಷದಿಂದ ಹೆಚ್ಚಾಗಿದೆ. ಮಲಿನ ನೀರು ಪೂರೈಕೆ, ಚರಂಡಿ ನೀರು ಕುಡಿಯುವ ನೀರಿಗೆ ಸೇರ್ಪಡೆ ಮುಂತಾದವು ಇದಕ್ಕೆ ಕಾರಣವೆನ್ನಲಾಗಿದೆ.
ಹಲವೆಡೆ ಈ ಬಗ್ಗೆ ಆರೋಗ್ಯಾಧಿಕಾರಿಗಳು ಜಾಗೃತಿ ಮೂಡಿದ್ದರೂ ಜನರನ್ನು ತಲುಪವಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಕಳೆದ ಒಂದು ವರ್ಷದಲ್ಲಿ 20 ಕ್ಕೂ ಹೆಚ್ಚು ಮಂದಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟಿದ್ದಾರೆ.




