Ad imageAd image

ಉತ್ತರ ಕನ್ನಡದಲ್ಲಿ ಭೀಕರ ಅಪಘಾತ : ಬಾಗಲಕೋಟೆ ಮೂಲದ ಮೂವರು ಸಾವು 

Bharath Vaibhav
ಉತ್ತರ ಕನ್ನಡದಲ್ಲಿ ಭೀಕರ ಅಪಘಾತ : ಬಾಗಲಕೋಟೆ ಮೂಲದ ಮೂವರು ಸಾವು 
WhatsApp Group Join Now
Telegram Group Join Now

ಉತ್ತರಕನ್ನಡ : ಅತೀ ವೇಗದಲ್ಲಿ ತೆರಳುತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೂವರು ಸಾವು ಕಂಡು ಏಳು ಜನರಿಗೆ ಗಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ನಲ್ಲಿ ನಡೆದಿದೆ.

ಮೃತರು ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದ ನಿಲವ್ವ ಹರದೊಳ್ಳಿ (40),ಜಾಲಿಹಾಳ ಗ್ರಾಮದ ಗಿರಿಜವ್ವ ಬೂದನ್ನವರ (30), ಇನ್ನೋರ್ವ 45 ವರ್ಷದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ.

ಬಾಗಲಕೋಟೆಯಿಂದ ಮಂಗಳೂರಿಗೆ ಈ ಬಸ್ ತೆರಳುತಿದ್ದು ಯಲ್ಲಾಪುರ ಘಟ್ಟದಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅಜಾಗುರೂಕತೆಯಿಂದ ಬಂದು ಕೆಟ್ಟು ನಿಂತಿದ್ದ ಕೇರಳ ಮೂಲದ KL-07-DA-1366 ನಂಬರ್ ಲಾರಿ ಗೆ ಗುದ್ದಿದ ಪರಿಣಾಮ ಈ ಘಟನೆ ನೆಡೆದಿದೆ.

ಲಾರಿಯಾತ ಇಂಡಿಕೇಟರ್ ಹಾಕದೆ ಕತ್ತಲೆಯಲ್ಲಿ ರಸ್ತೆಯಂಚಿನಲ್ಲಿ ನಿಲ್ಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕ ಆಲಮಟ್ಟಿ ಗ್ರಾಮದ ಯಮನಪ್ಪ ಮಾಗಿ ಮೇಲೆ ಪ್ರಕರಣ ದಾಖಲಾಗಿದೆ.

ಇನ್ನು ಗಾಯಗೊಂಡ 7 ಜನ ಪ್ರಯಾಣಿಕರು ಸಹ ಬಾಗಲಕೋಟೆ ಮೂಲದವರಾಗಿದ್ದಾರೆ. ಇದರಲ್ಲಿ 12 ವರ್ಷದ ಚಿಕ್ಕ ಚಿಕ್ಕ ಮಕ್ಕಳು ಸೇರಿದ್ದು, ಗಂಭೀರ ಗಾಯ ವಾಗಿದ್ದು ಎಲ್ಲರನ್ನೂ ಹುಬ್ಬಳ್ಳಿ ಕಿಮ್ಸ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!