Ad imageAd image

ಕುಡಿತದ ಚಟ ಬಿಡಿಸಲು ನೀಡಿದ ಔಷಧಿ ಸೇವಿಸಿ ಮೂವರು ಸಾವು

Bharath Vaibhav
ಕುಡಿತದ ಚಟ ಬಿಡಿಸಲು ನೀಡಿದ ಔಷಧಿ ಸೇವಿಸಿ ಮೂವರು ಸಾವು
WhatsApp Group Join Now
Telegram Group Join Now

ಕಲಬುರ್ಗಿ: ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ ಸೇವಿಸಿ ಮೂವರು ಸಾವನ್ನಪ್ಪಿರುವಂತ ಶಾಂಕಿಂಗ್ ಘಟನೆ ನಡೆದಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಸೇಡಂ ತಾಲ್ಲೂಕಿನ ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು(45) ಹಾಗೂ ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್(30) ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಮೃತರು.

ಇದೇ ಔಷಧಿ ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪನರಸಿಂಹಲು ಅವರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಹಾಗೇ ಕುಡಿತದ ಚಟ ಬಿಡಿಸುತ್ತೇನೆ ಎಂಬುದಾಗಿ ಸಾಯಪ್ಪ ಮುತ್ಯಾ ಮದ್ಯ ವ್ಯಸನಿಗಳ ಮೂಗಿನಲ್ಲಿ ಔಷಧಿ ಹಾಕಿದ್ದರು.

ಸಾಯಪ್ಪ ಮುತ್ಯಾ ನೀಡಿದಂತ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!