Ad imageAd image

ಮೂರು ಲೋಕಕ್ಕು ಬಸವಣ್ಣನೆ ದೇವರು: ಗುರುಬಸವ ಪಟ್ಟದೇವರು

Bharath Vaibhav
ಮೂರು ಲೋಕಕ್ಕು ಬಸವಣ್ಣನೆ ದೇವರು: ಗುರುಬಸವ ಪಟ್ಟದೇವರು
WhatsApp Group Join Now
Telegram Group Join Now

ಭಾಲ್ಕಿ: ಕುರುಬಖೇಳಗಿ ಗ್ರಾಮದಲ್ಲಿ ನಡೆದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ಬಸವ ಜಯಂತಿ ಉತ್ಸವ ನಾಲ್ಕನೇ ದಿನದ ಬಸವ ದರ್ಶನ ಪ್ರವಚನ ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಗುರುಬಸವ ಪಟ್ಟದೇವರು ತಮ್ಮ ಆಶೀರ್ವಚನದಲ್ಲಿ ಕುರುಬಖೇಳಗಿ ಗ್ರಾಮದಲ್ಲಿ ಬಸವ ಜಯಂತಿಯು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ನುಡಿಯುತ್ತ ಭಾಗವಂತ ಕೊಟ್ಟ ಈ ಶರೀರವು ಮನುಕುಲಕ್ಕೆ ಕಾಣಿಕೆಯಾಗಿದೆ ದೇಹದ ಅಂಗವಾದ ನಮ್ಮ ಕೈಗಳು ಒಳ್ಳೆಯ ಕೆಲಸಕ್ಕಾಗಿ ಬಳಸಬೇಕು ನಮ್ಮ ಮನಸ್ಸಿನಲ್ಲಿಯೂ ಒಳ್ಳೆಯ ವಿಚಾರಗಳನ್ನು ಮಾಡಬೇಕು ಬಸವಣ್ಣನವರು ಕೊಟ್ಟಿರುವ ವಚನಗಳನ್ನು ಆಲಿಸಿ ಪಠಿಸಿ ವಚನಗಳ ಪ್ರಕಾರ ತಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಬೇಕು ಹಾಗೂ ಯಾವುದೇ ಕೆಟ್ಟ ಚಟಕ್ಕೆ ದುರ್ಬುದ್ಧಿಗೆ ಬಲಿಯಾಗಲಿ, ಶರೀರವನ್ನು ಹಾಳು ಮಾಡಿಕೊಳ್ಳಬೇಡಿ ಮತ್ತು ಚಿಕ್ಕ ಮಕ್ಕಳಲ್ಲಿ ವಚನಗಳನ್ನು ಸಾಹಿತ್ಯದ ರುಚಿ ಹುಟ್ಟಿಸಿ ಅವರಿಗೆ ವಚನಗಳನ್ನು ಕಲಿಸಬೇಕು ಮೊಬೈಲ್ ದಿಂದ ಸಾಧ್ಯವಾದಷ್ಟು ದೂರ ಇಡಬೇಕು ನೊಂದವರ ಕಣ್ಣೀರು ಒರೆಸುವವನೇ ಜಗತ್ತಿನ ನಿಜವಾದ ಶ್ರೀಮಂತ ವ್ಯಕ್ತಿ ಹಾಗೂ ಹಸಿದವರಿಗೆ ಅನ್ನದಾಸೋಹ ಮಾಡುವವನೇ ನಿಜವಾದ ಭಕ್ತ, ಶರಣಾಗಿರುತ್ತಾನೆ ಅಣ್ಣ ಬಸವಣ್ಣ ಮುರು ಲೋಕಕ್ಕೂ ಒಬ್ಬನೇ ದೇವರು ಎಂದರು ಬಸವಣ್ಣನವರು ಎಲ್ಲರನ್ನು ಪ್ರೀತಿಸುತ್ತಿದ್ದರು ಎಲ್ಲರನ್ನು ಗೌರವಿಸುತ್ತಿದ್ದರು ಸಕಲ ಪ್ರಾಣಿಗಳಿಗೆ ಲೆಸನ್ನೆ ಬಯಸಿ ಪ್ರೀತಿಸುತ್ತಿದ್ದರು ಆದುದ್ದರಿಂದಲೇ ಗುರು ಬಸವಣ್ಣ ವಿಶ್ವಗುರು ಆದರೂ ಹೀಗೆ ಅನೇಕ ರೀತಿಯ ಬಸವಣ್ಣನವರ ಮಹಿಮೆಗಳನ್ನು ತಮ್ಮ ಆಶೀರ್ವಚನದಲ್ಲಿ ತಿಳಿಹೇಳಿದರು.

 

 

ಕಾರ್ಯಕ್ರಮದಲ್ಲಿ ಪರಮಪೂಜ್ಯ ಪ್ರಭುಲಿಂಗ ಸ್ವಾಮಿಗಳು ಮತ್ತು ಯುವ ಯತಿಗಳು ನೇತ್ರತ್ವವನ್ನು ವಹಿಸಿ ತಮ್ಮ ಆಶೀರ್ವಚನ ನುಡಿದರು ಈ ಕಾರ್ಯಕ್ರಮಕ್ಕೆ ಅಕ್ಕಪಕ್ಕದ ಗ್ರಾಮದ ನೂರಾರು ಮಹಿಳೆಯರು ಹಾಗೂ ಪುರುಷರು ಉಪಸ್ಥಿತರಿದ್ದರು ಪತಿನಿತ್ಯ ನಿರಂತರ ಪ್ರಸಾದ ವ್ಯವಸ್ಥೆ ಇರೋದು ವಿಶೇಷ.

 

ಕಾರ್ಯಕ್ರಮದ ಆಯೋಜಕರಾದ ಶ್ರೀ ಬಸವೇಶ್ವರ್ ದೇವಸ್ಥಾನ ಕಮಿಟಿ ಕುರುಬಖೇಳಗಿ ಗ್ರಾಮದ ಎಲ್ಲ ಪದಾಧಿಕಾರಿಗಳು ವ್ಯವಸ್ಥೆಯನ್ನು ಸುಸುತ್ರವಾಗಿ ನಡೆಸಿಕೊಟ್ಟರು.

ವರದಿ : ಸಂತೋಷ ಬಿಜಿ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!