ರಾಯಚೂರು : ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಮೃತರು ರಮಝಾನ್ ಹಿನ್ನೆಲೆ ನಮಾಜ್ಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಮೃತರನ್ನು ಮೊಹಮದ್ ಅಲಿ ಪಾಶಾ (24), ನೂರ ಮೊಹಮದ್ (19) ಮತ್ತು ಫಯಾಜ್ (26) ಎಂದು ಗುರುತಿಸಲಾಗಿದೆ. ಇವರು ಮೂವರೂ ನಗರದ ಸುಖಾಣಿ ಕಾಲೋನಿ ನಿವಾಸಿಗಳಾಗಿದ್ದಾರೆ. ಯುವಕರ ಸಾವಿನಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮೇಳೈಸಿದ್ದು, ಕಾಲೋನಿಯಲ್ಲಿ ಶೋಕ ವಾತಾವರಣ ಆವರಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಗಂಜ್ ವೃತ್ತದ ದಿಕ್ಕಿನಿಂದ ಬರುತ್ತಿದ್ದ ಟ್ರಕ್, ಲಿಂಗಸುಗೂರು ರಸ್ತೆಯ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಸವಾರರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದ ಶಬ್ದಕ್ಕೆ ಸ್ಥಳೀಯರು ಓಡಿ ಬಂದು ನೋಡಿದಾಗ ರಕ್ತದ ಕೆರೆಯಲ್ಲಿ ಮೂವರು ಬಿದ್ದಿರುವುದು ಕಂಡುಬಂದಿದೆ.
ವರದಿ : ಗಾರಲದಿನ್ನಿ ವೀರನಗೌಡ




