ಚಿಕ್ಕೋಡಿ: ಪಟ್ಟಣದ ಶಾಸಕರಾದ ಗಣೇಶ ಹುಕ್ಕೇರಿ ಅವರು ಚಿಕ್ಕೋಡಿ ಪಟ್ಟಣದ ಗುರುವಾರ ಪೇಟೆ ರಸ್ತೆಯ ಅಗಲೀಕರಣ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಬಹುಕಾಲದಿಂದ ಈ ರಸ್ತೆ ಸಣ್ಣದಾಗಿ, ಜನರ ಸಂಚಾರ ಹಾಗೂ ವಾಹನಗಳಿಂದ ಜನದಟ್ಟಣೆ ಹೆಚ್ಚಾಗಿ, ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದರು. ರಸ್ತೆ ಅಗಲೀಕರಣದ ಮೂಲಕ ಪಟ್ಟಣದ ಸಂಚಾರ ಸುಗಮವಾಗುವದಷ್ಟೇ ಅಲ್ಲದೇ, ವ್ಯಾಪಾರ ವಹಿವಾಟಿಗೂ ಗತಿಶೀಲತೆ ದೊರೆಯಲಿದೆ.
ಶಾಸಕರು ಕಾಮಗಾರಿಯ ಪ್ರಗತಿ ಪರಿಶೀಲಿಸಿ, ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದರು.
ವರದಿ: ರಾಜು ಮುಂಡೆ




