ಬೆಂಗಳೂರು: ಮೀಡಿಯಾ ಮುಂದೆ ಮಾತನಾಡುವಾಗ ಅಬ್ಬರಿಸುವ ಸಿಎಂ, ಹೈಕಮಾಂಡ್ ಮುಂದೆ ಮಾತನಾಡುವಾಗ ಬೆನ್ನು ಮೂಳೆ ಇಲ್ಲದವರ ರೀತಿ ನಡು ಬಗ್ಗಿಸಿ ನಿಂತಿದ್ದೇಕೆ..!! ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಕುರಿತು ಕರ್ನಾಟಕ ಬಿಜೆಪಿ ಪೋಸ್ಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಮಿಡಿಯಾ ಮುಂದೆ ಮಾತನಾಡುವ ಫೋಟೊಗೆ ಮಿಡಿಯಾ ಮುಂದೆ ಹುಲಿ ಹಾಗೂ ಕೂತಿರುವ ಫೋಟೊಗೆ ಹೈಕಮಾಂಡ್ ಮುಂದೆ ಇಲಿ ಅಂತ ಶೀರ್ಷಿಕೆ ಹೊಂದಿರುವ ಪೋಸ್ಟರ್ ಶೇರ್ ಮಾಡಿದೆ.
ಮೀಡಿಯಾ ಎದುರಿಗೆ ಅಬ್ಬರಿಸಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರು, ಹೈಕಮಾಂಡ್ ಮುಂದೆ ಯಾಕೆ ನಡುಬಗ್ಗಿಸಿ ನಿಲ್ತಾರೆ ಎಂದು ಟ್ವೀಟ್ ಮೂಲಕ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಇತ್ತಿಚೆಗೆ ಆರ್.ಸಿ.ಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಘಟನೆಯ ವರದಿ ಸಲ್ಲಿಸಲು ಹೈಕಮಾಂಡ್ ನಾಯಕನ್ನು ಸಿಎಂ ಸಿದ್ದರಾಮಯ್ಯ ನಿನ್ನೆ(ಮಂಗಳವಾರ) ಭೇಟಿಯಾದರು.
ಈ ವೇಳೆ ಕೆಲವು ವಿಚಾರಗಳ ಬಗ್ಗೆ ಚರ್ಚೆ ಸಿಎಂ ನಡೆಸಿದ್ದಾರೆ ಎನ್ನಲಾಗಿದೆ. ಸಂಪುಟ ಪುನಾರಚನೆ ಹಾಗೂ ಮತ್ತೊಮ್ಮೆ ಜಾತಿ ಗಣತಿ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ. ಈ ಭೇಟಿಯ ಹಿನ್ನೆಲೆ ಇದೀಗ ಸಿಎಂ ಬದಲಾವಣೆ ಕುರಿತಾದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ ವಿಪ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಹೈಕಮಾಂಡ್ ಈ ವಿಚಾರವಾಗಿ ಯಾವುದೇ ಗಡುವು ನೀಡಿಲ್ಲ. ಸಿದ್ದರಾಮಯ್ಯ ಸಿಎಂ ಆಗಿಯೇ ಅವಧಿ ಪೂರ್ಣಗೊಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ದೆಹಲಿಯಲ್ಲಿ ಎಐಸಿಸಿ ನಾಯಕರನ್ನು ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮಾತುಕತೆ ನಡೆಸಿರುವ ವಿಚಾರವನ್ನು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.