ಕೋಲ್ಕತ್ತಾ: ಕಳೆದ ರಾತ್ರಿ ಮುಂಬೈ ಇಂಡಿಯನ್ಸ ಹಾಗೂ ಲಕ್ನೋ ಸೂಪರ್ ಗೇಂಟ್ಸ್ ನಡುವನ ಪಂದ್ಯದದಲ್ಲಿ ನಡೆದ ತಿಲಕ ವರ್ಮಾ ರಿಟೈರ್ ಹರ್ಟ್ ಗೆ ಸಂಬಂಧಿಸಿದಂತೆ ಮುಂಬೈ ಇಂಡಿಯನ್ಸ್ ಕೋಚ್ ಜಯವರ್ಧನೆ ಸ್ಪಷ್ಟನೆಯೊಂದನ್ನು ನೀಡಿದ್ದಾರೆ.
ತಿಲಕ ವರ್ಮಾ ಸಮಯಕ್ಕೆ ತಕ್ಕಂತೆ ವೇಗದ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಅವರು ಕೊನೆಯ ಓವರ್ ವರೆಗೆ ತಮ್ಮ ಲಯ ಕಂಡುಕೊಳ್ಳುತ್ತಾರೆ ಎಂದು ಅಂದುಕೊಂಡಿದ್ದೇವು. ಅವರು ಹೊಡೆತಗಳನ್ನು ಹೊಡೆಯಲು ಪರದಾಡುತ್ತಿದ್ದರು. ಆದ ಕಾರಣ ಅವರ ಬದಲಿಗೆ ಬೇರೊಬ್ಬ ಆಟಗಾರರನ್ನು ಕಳುಹಿಸುವ ನಿರ್ಧಾರ ಕೈಗೊಂಡೆವು ಎಂದು ಜಯವರ್ಧನೆ ಸ್ಪಷ್ಟನೆ ನೀಡಿದ್ದಾರೆ.