Ad imageAd image

ಗಂಡ, ಮಕ್ಕಳನ್ನು ಬಿಟ್ಟು ಪ್ರಿಯತಮನೊಂದಗೆ ಓಡಿ ಮಹಿಳೆ : 13 ವರ್ಷದ ದಾಂಪತ್ಯಕ್ಕೆ ತಿಲಾಂಜಲಿ

Bharath Vaibhav
ಗಂಡ, ಮಕ್ಕಳನ್ನು ಬಿಟ್ಟು ಪ್ರಿಯತಮನೊಂದಗೆ ಓಡಿ ಮಹಿಳೆ : 13 ವರ್ಷದ ದಾಂಪತ್ಯಕ್ಕೆ ತಿಲಾಂಜಲಿ
WhatsApp Group Join Now
Telegram Group Join Now

ನೆಲಮಂಗಲ: ಸೋಶಿಯಲ್‌ ಮೀಡಿಯಾದಿಂದ ಸಂಸಾರವೇ ಮುರಿದು ಹೋಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಇಲ್ಲೊರ್ವ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಪರಿಚಿತನಾದ ಯುವಕನೊಂದಿಗೆ ಮದುವೆಯಾಗುವ ಸಲುವಾಗಿ ಗಂಡ ಹಾಗೂ ಮಕ್ಕಳನ್ನು ತೊರೆದು ಹೋಗಿರುವ ಪ್ರಕರಣವು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ನೇತ್ರಾವತಿ 13 ವರ್ಷಗಳ ಹಿಂದೆ ರಮೇಶ್ ಎಂಬ ಡ್ರೈವರ್‌ರನ್ನು ವಿವಾಹವಾಗಿದ್ದಳು. ಮದುವೆಯಾದ ನಂತರ ಮಕ್ಕಳ ಸರಳ ಜೀವನವನ್ನು ನಡೆಸುತ್ತಿದ್ದರು.

ಆದರೆ ರಮೇಶ್ ಡ್ರೈವರ್‌ ಆದ ಕಾರಣದಿಂದಾಗಿ ಹೆಚ್ಚು ಸಮಯ ಮನೆಯ ಹೊರಗೇ ಕಳೆದಿದ್ದನು. ಈ ಮಧ್ಯೆ, ನೇತ್ರಾವತಿ ಹೊಸ ಮೊಬೈಲ್ ಖರೀದಿಸಿ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದು ರೀಲ್ಸ್‌ ಮಾಡಲು ಮುಂದಾಗಿದ್ದಳು.

ರೀಲ್ಸ್ ಮಾಡುತ್ತಿದ್ದ ನೇತ್ರಾವತಿ, ಜನರ ಗಮನ ಸೆಳೆಯತೊಡಗಿದಳು. ನಂತರ ಹಲವು ಜನರಿಂದ ಮೆಸೇಜ್‌ಗಳು ಬರಲಾರಂಭಿಸಿದವು. ಇದೇ ಸಂದರ್ಭದಲ್ಲಿ ಸಂತೋಷ್ ಎಂಬ ಯುವಕನೊಂದಿಗೆ ಪರಿಚಯವಾಗಿದ್ದು, ಪರಿಚಯದಿಂದ ಇಬ್ಬರ ನಡುವೆ ಪ್ರೀತಿ ಬೆಳೆದಿತ್ತು.

ಸಂತೋಷ್ ಜೊತೆ ಕೇವಲ ಒಂದು ವಾರದ ಪರಿಚಯದ ಬಳಿಕ ನೇತ್ರಾವತಿ ತನ್ನ ಗಂಡ ರಮೇಶ್ ಹಾಗೂ ಮಕ್ಕಳನ್ನು ಬಿಟ್ಟು ಹೋಗಿದ್ದಳು. ಮನೆಯವರಿಗೆ ಈ ಕುರಿತು ಯಾವುದೇ ಸುಳಿವು ಇರಲಿಲ್ಲ.

ಇನ್‌ಸ್ಟಾಗ್ರಾಂನಲ್ಲಿ ಆ ಯುವಕನ ಜೊತೆ ಪ್ರೀತಿ ಬೆಳೆದ ನಂತರ, ಅವರು ವಿವಾಹವಾದ ವಿಡಿಯೋವನ್ನೇ ಪೋಸ್ಟ್ ಮಾಡಿದ್ದಾಳೆ. ಇನ್‌ಸ್ಟಾಗ್ರಾಮ್‌ ರೀಲ್ಸ್‌ ನೋಡಿದ ಗಂಡ ಫುಲ್‌ ಶಾಕ್‌ ಆಗಿದ್ದಾನೆ. ಬಳಿಕ ರಮೇಶ್ ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಮದುವೆಯಾದ ಕೆಲ ದಿನಗಳ ನಂತರ ನೇತ್ರಾವತಿ, ತನ್ನ ಹಳೆಯ ಮನೆಗೆ ಬಟ್ಟೆ ಹಾಗೂ ಆಭರಣಗಳನ್ನು ತೆಗೆದುಕೊಳ್ಳಲು ಪೊಲೀಸ್‌ ಭದ್ರತೆಯಲ್ಲಿ ನೇತ್ರಾವತಿ ಬಂದಿದ್ದು, ಈ ಸಂದರ್ಭದಲ್ಲಿ ಗಂಡನ ಮನೆಯವರು ಆಕೆಯನ್ನು ತರಾಟೆಗೆ ತೆಗೆದುಕೊಂಡರು.

ಈ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಡ ರಮೇಶ್ ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಯುತ್ತಿದೆ.

 

 

 

WhatsApp Group Join Now
Telegram Group Join Now
Share This Article
error: Content is protected !!